B’TOWN| ನಟ ಅಮಿತಾಬ್ ಬಚ್ಚನ್‌ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಏನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಗ್ ಬಿ ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಶೇರ್ ಮಾಡಿರುವ ವಿಡಿಯೋವೊಂದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.

ತಲೆಯ ಮಧ್ಯದಲ್ಲಿ ಉದ್ದನೆಯ ಪೋನಿಟೇಲ್ ಹೊಂದಿರುವ ಪೋಲೀಸ್ ರಸ್ತೆಯಲ್ಲಿ ನಡೆಯುತ್ತಿದ್ದಾರೆ. ಫ್ಯಾನ್ ನಂತೆ ಕೂದಲು ಗಿರಕಿ ಹೊಡೆಯುತ್ತಾ ಅವರು ನಡೆಯುವ ರೀತಿ ಸ್ವಾರಸ್ಯಕರವಾಗಿದೆ. ಬಿಸಿಲಿನ ತಾಪಕ್ಕೆ ತಣ್ಣಗಾಗಲು ತಮ್ಮದೇ ಫ್ಯಾನ್ ಅನ್ನು ಹೊತ್ತೊಯ್ದಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ಅಮಿತಾಬ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅಮಿತಾಜ್ ಶೇರ್ ಮಾಡಿರುವ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ನಿಮ್ಮ ನಿಜವಾದ ಅಭಿಮಾನಿಯಾಗಿರಬಹುದು’ ಎಂದು ರಿಪ್ಲೈ ಮಾಡ್ತಿದಾರೆ.

https://www.instagram.com/p/CsVFcjyB2Im/?utm_source=ig_embed&utm_campaign=embed_video_watch_again

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!