ಬುರ್ಖಾ ಧರಿಸದ ವಿದ್ಯಾರ್ಥಿನಿಯರಿಗೆ ಅಮಾನುಷವಾಗಿ ಥಳಿಸಿದ ತಾಲೀಬಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಫ್ಘಾನಿಸ್ತಾನದ ತಾಲಿಬಾನಿಗಳು ಬುರ್ಖಾ ಧರಿಸದ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾಲಯಕ್ಕೆ ಪ್ರವೇಶ ನಿರಾಕರಿಸಿದ್ದು, ತಮ್ಮ ಶಿಕ್ಷಣದ ಹಕ್ಕು ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರಿಗೆ  ಥಳಿಸುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
ಈ ಘಟನೆ ಈಶಾನ್ಯ ಅಫ್ಘಾನಿಸ್ತಾನದ ಬಡಾಕ್ಷನ್ ವಿಶ್ವವಿದ್ಯಾಲಯದ ಗೇಟ್ ಹೊರಗಡೆ ನಡೆದಿದೆ ಎನ್ನಲಾಗಿದೆ. ಹಲವು ವಿದ್ಯಾರ್ಥಿನಿಯರು ವಿವಿ ಪ್ರವೇಶಕ್ಕಾಗಿ ಗೇಟ್ ಹೊರಗಡೆ ಕಾದು ನಿಂತಿದ್ದಾರೆ.
ಈ ವೇಳೆ ತಾಲಿಬಾನ್ ಸರ್ಕಾರದ ಅಧಿಕಾರಿಯೊಬ್ಬ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಚಾಟಿ ಬೀಸುತ್ತಿರುವುದನ್ನು ಕಾಣಬಹುದು.
ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ, ತಾಲಿಬಾನ್ ಮಹಿಳೆಯರ ಚಲನೆ, ವಾಕ್, ಅಭಿವ್ಯಕ್ತಿ, ಕೆಲಸದ ಅವಕಾಶಗಳು ಮತ್ತು ಉಡುಪಿನ ಸ್ವಾತಂತ್ರ್ಯದ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿದೆ. ಆರನೇ ತರಗತಿಯಿಂದ ಹುಡುಗಿಯರು ಶಾಲೆಗೆ ಹೋಗುವುದನ್ನು ಅವರು ನಿರ್ಬಂಧಿಸಿದ್ದಾರೆ. ತಾಲಿಬಾನ್‌ ಸರ್ಕಾರವು ಸಾರ್ವಜನಿಕವಾಗಿ ಮಹಿಳೆಯರಿಗೆ ಉಡುಪಿನ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರನ್ವಯ ನಿಖಾಬ್ (ತಲೆ ಮತ್ತು ಮುಖವನ್ನು ಮುಚ್ಚುವ ಮುಸುಕು) ಬುರ್ಖಾ ಧರಿಸುವುದು ಖಡ್ಡಾಯ ಎಂದು ಸೂಚಿಸಿದೆ. ಆದರೆ ಈ ಆದೇಶದ ವಿರುದ್ಧ ಮಹಿಳೆಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಹದಗೆಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!