ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್‌ನಲ್ಲಿ ಮಿಸ್ಟರ್ ಕೂಲ್ ಕ್ಯಾಪ್ಟನ್ ಎಂದೇ ಕರೆಸಿಕೊಳ್ಳುವ ಈ ಕ್ರಿಕೆಟಿಗನ ಕ್ರೇಜ್ ಅಷ್ಟಿಷ್ಟಲ್ಲ. ಧೋನಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ಅವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈತನ ಸರಳತೆಯೇ ಹೋದಲ್ಲೆಲ್ಲಾ ಅವರ ಅಭಿಮಾನಿಗಳು ಮತ್ತು ಸ್ಥಳೀಯರು ಅವರನ್ನು ಅಭಿಮಾನದಿಂದ ನೋಡಲು ಕಾರಣ. ತಮ್ಮ ಶ್ರಮದಿಂದ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿ ಕೋಟಿ ಕೋಟಿ ಜನರ ಮೆಚ್ಚುಗೆಗೆ ಪಾತ್ರರಾದ ಕ್ರೀಡಾ ಪಟು.
ಇತ್ತೀಚೆಗೆ ಈ ಮಿಸ್ಟರ್ ಕೂಲ್ ತನ್ನ ಪತ್ನಿಯೊಂದಿಗೆ ತನ್ನ ಪೂರ್ವಜರ ಉತ್ತರಾಖಂಡದ ಅಲ್ಮೋರಾಸ್‌ನಲ್ಲಿರುವ ಲ್ವಾಲಿಗೆ ಭೇಟಿ ನೀಡಿದ್ದರು. ಸಾಕ್ಷಿ ಸಿಂಗ್ ಮತ್ತು ಮಗಳು ಜೀವಾ. ಅಲ್ಲಿನ ಸ್ಥಳೀಯರೊಂದಿಗೆ ತುಂಬಾ ಸಾಮಾನ್ಯರಂತೆ ಬೆರೆತುಹೋದರು.
ಧೋನಿಯನ್ನು ನೋಡಿದ ಕೂಡಲೇ ಗ್ರಾಮಸ್ಥರು ಸುತ್ತುವರೆದು ಪ್ರೀತಿಯಿಂದ ಅಪ್ಪಿಕೊಂಡರು. ಧೋನಿ ಕೂಡ ಅವರನ್ನು ಶುದ್ಧ ನಗುವಿನೊಂದಿಗೆ ಅಪ್ಪಿಕೊಂಡು, ಆಶೀರ್ವಾದ ಪಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೆಂಡತಿಯೊಂದಿಗೆ ಹಳ್ಳಿಯ ಸೊಬಗನ್ನು ನೋಡಿ ಆನಂದಿಸಿದರು. ಪತ್ನಿ, ಮಗಳೊಂದಿಗೆ ಮನೆ ಮುಂದೆ ಕುಳಿತಿರುವ ಫೋಟೋವೊಂದು ವೈರಲ್ ಆಗಿದೆ.
The way MS Dhoni touched feet and giving respect his elders is so beautiful.
MS Dhoni – The man of culture, What a great man! 🐐 pic.twitter.com/8ftuBrB1lz
— CricketMAN2 (@ImTanujSingh) November 16, 2023