August 30, 2026
Sunday, August 30, 2026
spot_img

ಕಾವೇರಿ ನೀರು ಬಿಡುಗಡೆ ವಿವಾದದ ನಡುವೆ ಸಿಎಂ ವಿಜಯ್‌ ಸ್ವಾಗತಕ್ಕೆ ಸಜ್ಜಾದ ವಿಧಾನಸೌಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿಗೆ ನೀರು ಕೊಡೋಕೆ ಸಾಧ್ಯವಿಲ್ಲ, ನಮಗೇ ನೀರಿಲ್ಲ ಎಂದು ರೈತರು ಹಗಲು ರಾತ್ರಿ ಎನ್ನದೇ ಚಿಂತೆಯಲ್ಲಿದ್ದಾರೆ. ಇತ್ತ ಆಗಸ್ಟ್‌ ಮೂರರಂದು ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ವಿಧಾನಸೌಧದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ಚರ್ಚೆ ಮಾಡಲು ವಿಜಯ್‌ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವಿಧಾನಸೌಧದ ಸಭಾಂಗಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ತಯಾರಿ ನಡೆಯುತ್ತಿದೆ.

ವಿಜಯ್‌ ಬರುವ ಹಾದಿಯಲ್ಲಿ ಸುಣ್ಣಬಣ್ಣ, ಸಭಾಂಗಣದ ಆಸನ ವ್ಯವಸ್ಥೆ ಹಾಗೂ ನವೀಕರಣ ಕೆಲಸ ನಡೆಯುತ್ತಿದೆ. ಇತ್ತ ರೈತರು ಮಾತ್ರ ಈ ನಿರ್ಣಯದಿಂದ ಖುಷಿಯಾಗಿಲ್ಲ.

ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚನೆಯಂತೆ ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ಬಿಡುವ ಆದೇಶವನ್ನು ಮಂಡ್ಯ ರೈತರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ರಾಜ್ಯದಲ್ಲಿ ನೀರಿನ ಕೊರತೆ ಇರುವಾಗ ನೀರು ಬಿಡುಗಡೆ ಅಸಾಧ್ಯ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ಹನಿ ನೀರು ಬಿಟ್ಟರೂ ರಾಜ್ಯಾದ್ಯಂತ ಬಂದ್ ಕರೆ ನೀಡುವ ಎಚ್ಚರಿಕೆಯನ್ನು ಕನ್ನಡಪರ ಸಂಘಟನೆಗಳು ನೀಡಿವೆ.

ಈವರೆಗೂ ಯಾವುದೇ ತಮಿಳುನಾಡು ಸಿಎಂ ಕಾವೇರಿ ನೀರಿನ ಭೇಟಿಯ ಬಗ್ಗೆ ಮಾತನಾಡೋದಕ್ಕೆ ಬೆಂಗಳೂರಿಗೆ ಆಗಮಿಸಿಲ್ಲ. ಅವರಂತೆಯೇ ವಿಜಯ್‌ ಕೂಡ ಮಾಡ್ತಾರಾ ಅಥವಾ ಬರ್ತಾರಾ ಕಾದುನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !