September 29, 2026
Tuesday, September 29, 2026
spot_img

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯರ ಮೃತದೇಹ ಭಾರತಕ್ಕೆ ರವಾನೆ ಪ್ರಕ್ರಿಯೆ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಯೆಟ್ನಾಂನ ಫು ಕ್ವೋಕ್ ದ್ವೀಪದ ಸಮೀಪ ಸಂಭವಿಸಿದ ಭೀಕರ ಸ್ಪೀಡ್‌ಬೋಟ್ ದುರಂತದಲ್ಲಿ ಮೃತಪಟ್ಟ 15 ಭಾರತೀಯರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಭಾರತೀಯ ರಾಯಭಾರ ಕಚೇರಿ ಕ್ರಮ ಆರಂಭಿಸಿದೆ. ಇದೇ ವೇಳೆ ಗಾಯಗೊಂಡು ಬದುಕುಳಿದ ಪ್ರವಾಸಿಗರಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ.

ಮೃತದೇಹ ರವಾನೆಗೆ ಕ್ರಮ

ಮೃತರ ಪಾರ್ಥಿವ ಶರೀರವನ್ನು ಮೊದಲು ಹೋ ಚಿ ಮಿನ್ ನಗರಕ್ಕೆ ಸ್ಥಳಾಂತರಿಸಿ, ಅಗತ್ಯ ದಾಖಲೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಭಾರತಕ್ಕೆ ರವಾನಿಸಲು ಭಾರತೀಯ ರಾಯಭಾರ ಕಚೇರಿ ಹಾಗೂ ಸ್ಥಳೀಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

15 ಭಾರತೀಯರ ದುರ್ಮರಣ

ದ್ವೀಪ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಸ್ಪೀಡ್‌ಬೋಟ್ ಪಲ್ಟಿಯಾದ ಪರಿಣಾಮ 15 ಭಾರತೀಯರು ಮೃತಪಟ್ಟಿದ್ದಾರೆ. ಮೃತರಲ್ಲಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದ ಪ್ರವಾಸಿಗರು ಸೇರಿದ್ದಾರೆ.

ಇದನ್ನೂ ಓದಿ:

ಬದುಕುಳಿದವರಿಗೆ ಚಿಕಿತ್ಸೆ

ದುರಂತದಿಂದ ಪಾರಾದವರಲ್ಲಿ 16 ಮಂದಿ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳುವ ಪ್ರಯಾಣ ಆರಂಭಿಸಿದ್ದಾರೆ. ಇನ್ನೊಬ್ಬ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಟುಂಬಗಳಿಗೆ ಸರ್ಕಾರದ ನೆರವು

ಭಾರತೀಯ ರಾಯಭಾರ ಕಚೇರಿ, ವಿಯೆಟ್ನಾಂ ಅಧಿಕಾರಿಗಳು ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳು ಮೃತರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುತ್ತಿದ್ದು, ಪಾರ್ಥಿವ ಶರೀರವನ್ನು ಶೀಘ್ರವಾಗಿ ತವರಿಗೆ ತಲುಪಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿವೆ.

Must Read