ಸನ್‌ಫ್ಲೇಮ್ ಎಂಟರ್‌ಪ್ರೈಸಸ್ ಅನ್ನು 660 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡ ವಿಗಾರ್ಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೊಚ್ಚಿ ಮೂಲದ ವಿ-ಗಾರ್ಡ್ ಇಂಡಸ್ಟ್ರೀಸ್ (ವಿ-ಗಾರ್ಡ್) ಸನ್‌ಫ್ಲೇಮ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ (ಎಸ್‌ಇಪಿಎಲ್) 660 ಕೋಟಿ ರೂ.ಗೆ 100 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಶನಿವಾರ ಪ್ರಕಟಿಸಿದೆ.

ಈ ಸ್ವಾಧೀನ ಪಡಿಸಿಕೊಳ್ಳುವಿಕೆಯು ಜನವರಿ 2023 ರ ಮಧ್ಯದ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಉನ್ನತ ವಿ-ಗಾರ್ಡ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ವೀಗಾರ್ಡ್‌ ದೇಶೀಯ ಅಡುಗೆಮನೆ ಉಪಕರಣಗಳ ವಿಭಾಗದಲ್ಲಿ ಗಮನಾರ್ಹ ಆಟಗಾರನಾಗುವ ಗುರಿ ಹೊಂದಿದೆ. ಪ್ರಸ್ತುತ ಪ್ಯಾನ್‌ ಇಂಡಿಯಾ ಬ್ರ್ಯಾಂಡ್‌ ಆಗಿರುವ ಸನ್‌ಫ್ಲೇಮ್ ಅನ್ನು ಸ್ವಾಧೀನ ಪಡಿಸಿಕೊಳ್ಳುವುದು ವಿಗಾರ್ಡ್‌ ಗೆ ಇನ್ನಷ್ಟು ಅನುಕೂಲ ಮಾಡಿಕೊಡಲಿದೆ.

ವಿ-ಗಾರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚಿಟ್ಟಿಲಪ್ಪಿಳ್ಳಿ ಮಾತನಾಡಿ, ಸನ್‌ಫ್ಲೇಮ್ ಭಾರತೀಯ ಮನೆಗಳ ನೆನಪಿನಲ್ಲಿ ಅಚ್ಚೊತ್ತಿರುವ ಐಕಾನಿಕ್ ಬ್ರ್ಯಾಂಡ್ ಆಗಿದ್ದು, ವಿ-ಗಾರ್ಡ್‌ನ ಪ್ರಮುಖ ಭಾರತೀಯ ಕಿಚನ್ ಉಪಕರಣಗಳ ಆಟಗಾರನಾಗುವ ಯೋಜನೆಗಳಿಗೆ ಗಮನಾರ್ಹವಾದ ಉತ್ತೇಜನವನ್ನು ನೀಡುವ ನಿರೀಕ್ಷೆಯಿದೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!