ದೆಹಲಿಯಲ್ಲಿ ‘ವಿಜಯ ದಶಮಿ’ ಸಂಭ್ರಮ’: ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ದ್ವಾರಕಾ ಸೆಕ್ಟರ್ 10 ರ ರಾಮ್ ಲೀಲಾ ಮೈದಾನದಲ್ಲಿ ನಡೆದ ‘ವಿಜಯ ದಶಮಿ (Vijaya Dashami)‘ ಉತ್ಸವದ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದರು.

ಸಂಜೆ 5.30ರ ಸುಮಾರಿಗೆ ಪ್ರಧಾನಿ ಸ್ಥಳಕ್ಕೆ ಆಗಮಿಸಿದ ಅವರುಪೂಜೆಯಲ್ಲಿ ಪಾಲ್ಗೊಂಡರು. ಇದೇ ವೇಳೆ, ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಂತರ ರಾವಣ ಪ್ರತಿಕೃತಿ ದಹನ (Ravan Dahan) ಕಾರ್ಯಕ್ರಮದಲ್ಲಿ ಭಾಗಿಯಾದರು.

ವಿಜಯ ದಶಮಿಯ ಅಂಗವಾಗಿ ಮಂಗಳವಾರ ಬೆಳಗ್ಗೆ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದ ಪ್ರಧಾನಿ ಮೋದಿ, ಈ ಧಾರ್ಮಿಕ ಹಬ್ಬವು ನಕಾರಾತ್ಮಕ ಶಕ್ತಿಗಳ ಅಂತ್ಯವನ್ನು ಸೂಚಿಸುತ್ತದೆ ಮತ್ತು ಜೀವನದಲ್ಲಿ ಒಳ್ಳೆಯದನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ತರುತ್ತದೆ ಎಂದು ಹೇಳಿದ್ದರು.

‘ದೇಶಾದ್ಯಂತ ಇರುವ ನನ್ನ ಕುಟುಂಬ ಸದಸ್ಯರಿಗೆ ವಿಜಯದಶಮಿಯ ಶುಭಾಶಯಗಳು. ಈ ಪವಿತ್ರ ಹಬ್ಬವು ನಕಾರಾತ್ಮಕ ಶಕ್ತಿಗಳನ್ನು ಕೊನೆಗೊಳಿಸುವ ಜೊತೆಗೆ ಜೀವನದಲ್ಲಿ ಒಳ್ಳೆಯತನವನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ತರುತ್ತದೆ. ನಿಮ್ಮೆಲ್ಲರಿಗೂ ವಿಜಯ ದಶಮಿಯ ಶುಭಾಶಯಗಳು’ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!