Sunday, December 4, 2022

Latest Posts

ಸಮಂತಾ ಜೊತೆಗಿನ ನನ್ನ ಪ್ರೀತಿ ಇಂದಿನದಲ್ಲ: ವಿಜಯದೇವರಕೊಂಡ ಕುತೂಹಲಕಾರಿ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಮಂತಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ, ಲೇಡಿ ಓರಿಯೆಂಟೆಡ್ ಸಿನಿಮಾ ಯಶೋದಾ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಆಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಯಶೋದಾ ಚಿತ್ರ ಮುಂದೂಡಲ್ಪಟ್ಟು ಮುಂಬರುವ ನವೆಂಬರ್ 11 ರಂದು ಬಿಡುಗಡೆಯಾಗಲಿದೆ. ಗುರುವಾರ ಯಶೋದಾ ಚಿತ್ರದ ಟ್ರೈಲರ್ ಅನ್ನು ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತೆಲುಗಿನಲ್ಲಿ ಯಶೋದಾ ಟ್ರೈಲರ್ ಅನ್ನು ವಿಜಯ್ ದೇವರಕೊಂಡ ಬಿಡುಗಡೆ ಮಾಡಿದರು.

ವಿಜಯ್ ಯಶೋದಾ ಟ್ರೇಲರ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಇಂಟರೆಸ್ಟಿಂಗ್ ಟ್ವೀಟ್ ಮಾಡಿದ್ದಾರೆ. ವಿಜಯ್ ಸಮಂತಾ ಬಗ್ಗೆ ಹೇಳುವುದಾದರೆ, ನಾನು ಸಮಂತಾ ಅವರನ್ನು ಮೊದಲ ಬಾರಿಗೆ ತೆರೆಯ ಮೇಲೆ ನೋಡಿದ್ದು ಕಾಲೇಜು ದಿನಗಳಲ್ಲಿ. ಅಗಿನಿಂದಲೇ ನಾನು ಅವರೊಂದಿಗೆ ಪ್ರೀತಿಯಲ್ಲಿ ಬಿದ್ದೆ. ಸಮಂತಾ ಸಾಧನೆ ನನಗೆ ಹೆಮ್ಮೆಯೆನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ವಿಜಯ್ ಅವರ ಕಾಮೆಂಟ್ ವೈರಲ್ ಆಗಿದೆ. ಸದ್ಯ ವಿಜಯ್ ಮತ್ತು ಸಮಂತಾ ಖುಷಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!