ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲನಚಿತ್ರ ನಿರ್ಮಾಪಕ, ನಿರೂಪಕ ಕರಣ್ ಜೋಹರ್ ನಡೆಸಿಕೊಡುತ್ತಿರುವ ಕಾಫಿ ವಿತ್ ಕರಣ್ 7ನ ಮುಂದಿನ ಸಂಚಿಕೆಯಲ್ಲಿ ಜಾನ್ವಿ ಕಪೂರ್ ಜೊತೆ ಸಾರಾ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ.
ಇದರ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ನೀಡಿದ್ದ ಹೇಳಿಕೆಯೊಂದಕ್ಕೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಅತ್ಯಂತ ಪ್ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಕರಣ್ ಜೋಹರ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಸಾರಾ ಅಲಿ ಖಾನ್ ನೀಡಿದ ಉತ್ತರ ಸಖತ್ ಸೌಂಡ್ ಮಾಡಿದೆ. ಇದೀಗ ಸ್ವತಃ ವಿಜಯ್ ದೇವರಕೊಂಡ ಸ್ಪೆಷಲ್, ಬ್ಯೂಟಿಫುಲ್ ರಿಯಾಕ್ಷನ್ ಕೊಟ್ಟಿದ್ದಾರೆ.
ಚಲನಚಿತ್ರೋದ್ಯಮದಿಂದ ಡೇಟ್ ಮಾಡಲು ಬಯಸುವ ವ್ಯಕ್ತಿಯ ಹೆಸರು ಹೇಳುವಂತೆ ಕರಣ್ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸಾರಾ ಅಲಿ ಖಾನ್ ನಾಚಿಕೊಂಡು, ಸಖತ್ ಕ್ಯೂಟ್ ಆಗಿ ವಿಜಯ್ ದೇವರಕೊಂಡ ಎಂದಿದ್ದಾರೆ. ಈ ಪ್ರೋಮೋ ಸಖತ್ ವೈರಲ್ ಆಗಿ ಸುದ್ದಿ ಮಾಡಿದೆ.
ಇದಕ್ಕೆ ಸ್ವತಃ ವಿಜಯ್ ದೇವರಕೊಂಡ ಅವರೇ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ-ನೀವು ನನ್ನ ಹೆಸರು ಹೇಳಿದ ರೀತಿ ನನಗೆ ಬಹಳ ಇಷ್ಟವಾಯಿತು, ಕ್ಯೂಟ್ ಆಗಿದೆ ಎಂದು ಬರೆದು ಹಗ್ಸ್, ರೆಡ್ ಹಾರ್ಟ್ ಇಮೋಜಿ ಹಾಕಿಕೊಂಡಿದ್ದಾರೆ. ನಟ ತನ್ನ ಪೋಸ್ಟ್‌ನಲ್ಲಿ ಸಾರಾ ಮತ್ತು ಜಾನ್ವಿಯನ್ನು ಸಹ ಟ್ಯಾಗ್ ಮಾಡಿದ್ದಾರೆ.