ನಮ್ಮ ಮುಂದಿನ ಪೀಳಿಗೆಗಾಗಿ ವೃಕ್ಷವನ್ನು ಬೆಳೆಸೋಣ: ಡಾ.ಡಿ.ವೀರೇಂದ್ರ ಹೆಗ್ಗಡೆ

ಹೊಸದಿಗಂತ ವರದಿ, ಮೈಸೂರು:

ನಮ್ಮ ಪೂರ್ವಜನರು ಸುಸ್ಥಿತಿಯಲ್ಲಿ ನೀಡಿದ ಪರಿಸರ, ಭೂಮಿಯನ್ನು ಉಳಿಸಿ, ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಸುಸ್ಥಿತಿಯಲ್ಲಿ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯರಾದ ರಾಜರ್ಷಿ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕೃತರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಬುಧವಾರ ಮೈಸೂರಿನ ಮುಕ್ತ ಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ರಿ , ರಾಜೇಶ್ ಸ್ನೇಹ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ 25000 ಸಸಿ ನೆಡುವ ‘ವನಸಿರಿ” ವನಮಹೋತ್ಸವ ಕಾರ್ಯಕ್ರಮವನ್ನು ಹೊಂಬಾಳೆ ಬಿಡಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಾಜರು ಪ್ರಕೃತಿಯ ಬಗ್ಗೆ ಇರುವ ನಮ್ಮ ಜ್ಞಾನವನ್ನು ಜಾಗೃತಗೊಳಿಸಿದ್ದಾರೆ. ಹಾಗಾಗಿ ಮುಂದಿನ ಜನಾಂಗದವರೆಗೂ ತಲುಪುವಂತೆ ಗಿಡಮರಗಳನ್ನು ಬೆಳೆಸಬೇಕು. ಹಸಿರನ್ನು ಉಳಿಸಿ ಪರಿಸರ ಬೆಳೆಸಿ ಎಂಬ ನಾಣ್ನುಡಿಯಂತೆ, ನಮ್ಮ ಮುಂದಿನ ಪೀಳಿಗೆಗಾಗಿ ವೃಕ್ಷವನ್ನು ಬೆಳೆಸಬೇಕು ಎಂದು ತಿಳಿಸಿದರು
ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತವೆ. ಏಕೆಂದರೆ ಕಾಡಿನಲ್ಲಿ ಇರುವ ವೃಕ್ಷಗಳು, ಮರಗಿಡಗಳನ್ನು ನಾವು ನಾಶ ಮಾಡಿದ್ದೇವೆ. ಹಾಗೂ ಪ್ರಾಣಿಗಳನ್ನು ನಾಶ ಮಾಡಿದ್ದೇವೆ. ಸಸಿಗಳನ್ನು ಹಾಗೂ ಪ್ರಾಣಿಗಳು ತಿನ್ನುವಂತ ಗಿಡಗಳನ್ನು ಕಾಡಿನಲ್ಲಿ ಬೆಳೆಸಿದರೆ, ಪ್ರಾಣಿಗಳು ನಾಡಿಗೆ ಬರುವುದಿಲ್ಲ ಹಾಗೆ ಪ್ರಾಣಿಗಳ ನಾಶವೂ ಕೂಡ ಆಗುವುದಿಲ್ಲ ಎಂದು ಸಲಹೆ ನೀಡಿದರು.
ಮೈಸೂರು ನಗರ ಸ್ವಚ್ಛತೆಯನ್ನು ಕಾಪಾಡುವಲ್ಲಿ ರಾಜಧಾನಿ ಆಗಬೇಕು. ಮೈಸೂರನ್ನು ಮಲಿನವಾಗದಂತೆ ನೋಡಿಕೊಳ್ಳಬೇಕು. ಇಂದು ನಮ್ಮ ರೂಡ್ ಸೆಟ್ ಸಂಸ್ಥೆ ಕಡೆಯಿಂದ 19000 ಮಂದಿ ಸ್ವಸಹಾಯ ಉದ್ಯೋಗಿಗಳಾಗಿದ್ದಾರೆ ಪರಿಸರವನ್ನು ನಾವು ಪ್ರೀತಿಸಬೇಕು ಪರಿಸರ ಪ್ರೇಮಿಗಳಾಗಬೇಕು ಪರಿಸರವನ್ನು ಉಳಿಸಬೇಕು. ಪ್ರತಿಯೊಂದು ವೃಕ್ಷದಲ್ಲಿ ತುಳಸಿ, ಬಿಲ್ವಪತ್ರೆ, ಆಲದ ಮರ ಹಾಗೂ ಅನೇಕ ವೃಕ್ಷಗಳಲ್ಲಿ ದೈವ ಸ್ವರೂಪ ಇರುವುದನ್ನು ನಾವು ನೋಡಿದ್ದೇವೆ. ಹಾಗೆ ಪ್ರತಿಯೊಂದು ವೃಕ್ಷದಲ್ಲೂ ಕೂಡ ನಾವು ದೈವ ರೂಪದಂತೆ ನೋಡಬೇಕು. ನಮ್ಮ ಪ್ರಕೃತಿಯನ್ನು ನಾವು ಮುಂದಿನ ಜನಾಂಗಕ್ಕೆ ಉಪಯೋಗವಾಗುವಂತೆ ಬಿಟ್ಟು ಕೊಡುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಆಸ್ಟ್ರೇಲಿಯಾ, ಅಮೇರಿಕ, ವಿದೇಶದಲ್ಲಿ ಸೂರ್ಯನ ಕಿರಣ ಬರದಂತೆ ಇರುವ ರೈನ್ ಫಾರೆಸ್ಟ್ ಎಂಬ ಅತ್ಯಂತ ದೊಡ್ಡ ಕಾಡುಗಳಿವೆ. ಆದರೆ, ಭಾರತವು ಅತ್ಯಂತ ಪುರಾತನ ಇತಿಹಾಸ ಹೊಂದಿರುವ ದೇಶವಾಗಿದ್ದರೂ, ಅಂತಹ ಮರಗಳನ್ನು ನಾವು ಇಂದು ಭಾರತದಲ್ಲಿ ಕಾಣಲಿಲ್ಲ. ಮಲೆನಾಡಿನಂತಹ ಸ್ಥಳಗಳಲ್ಲಿ ಈಗಲೂ ಸಹ ಸೂರ್ಯನ ಕಿರಣಗಳು ಭೂಮಿಗೆ ತಾಕದಂತೆ ಇರುವ ಮರಗಳು ನಾವು ನೋಡಿದ್ದರೂ ಸಹ, ಹೊರದೇಶದಲ್ಲಿ ಪೋಷಿಸಿರುವಷ್ಟು ನಾವು ಮರಗಳನ್ನು ಪೋಷಿಸಬೇಕು. ಸಸಿಗಳನ್ನು ನೆಟ್ಟರೆ ಸಾಲದು ಅದರ ಪೋಷಣೆ ತುಂಬಾ ಮುಖ್ಯ ಎಂದು ಕಿವಿ ಮಾತು ಹೇಳಿದರು.
ಸಮಾಜಮುಖಿ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಮರ ಹಸಿರು ಪ್ರಕೃತಿ ರಾಜಕೀಯ ಇದೆಲ್ಲಾ ವಿರುದ್ಧವಾಗಿರುವ ಸಂಬAಧವಾಗಿದೆ. ಪ್ರಸ್ತುತ ಗ್ಲೋಬಲ್ ವಾರ್ಮಿಂಗ್‌ನಿAದ ಆಗುತ್ತಿರುವ ಪರಿಣಾಮಗಳಿಂದಾಗಿ ಕ್ಯಾನ್ಸರ್ ಶ್ವಾಸಕೋಶ ತೊಂದರೆ ಹಾಗೂ ಅನೇಕ ಆರೋಗ್ಯ ಸಮಸ್ಯೆಗಳನ್ನು ನಾವು ನೋಡಿದ್ದೇವೆ. ಹಾಗೆಯೇ ಪ್ರಕೃತಿಗೂ ಕೂಡ ಇದೇ ಗ್ಲೋಬಲ್ ವಾರ್ಮಿಂಗ್ ಸಮಸ್ಯೆಯನ್ನು ಒಳಗೊಳಗೆ ಅನುಭವಿಸುತ್ತಿದೆ. ಹಾಗಾಗಿ ಪರಿಸರದಲ್ಲಿ ಭೂಕಂಪ, ಅತಿವೃಷ್ಟಿ-ಅನಾವೃಷ್ಟಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ 10,000 ಮರಗಳನ್ನು ನೆಡೆಸುವ ಕಾರ್ಯಗಾರವನ್ನು ಮಾಡಿದ್ದೆವು ಹಾಗೂ ಅದರ ಪೋಷಣೆಯನ್ನು ಕೂಡ ಮಾಡಿದ್ದೇವೆ ಮರಗಿಡಗಳನ್ನು ಒಂದು ದಿನದ ಮಟ್ಟಿಗೆ ನೆಟ್ಟ ಮಾತ್ರಕ್ಕೆ ಸಾಲದು ಅವುಗಳ ಪೋಷಣೆಗೂ ಕೂಡ ಜವಾಬ್ದಾರಿಯುತ ಕೆಲಸವಾಗಿದೆ. ಇಂದು ನಾವು ಹೆಚ್ಚು ಮಳೆ ಆಗುತ್ತಿರುವುದನ್ನು ನಾವು ನೋಡಿದ್ದೇವೆ. ಎಂಟು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಇನ್ನು ನಾಲ್ಕು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಕೆಲವೊಂದು ಜಿಲ್ಲೆಗಳಲ್ಲಿ ಮಳೆಯೂ ಕೂಡ ಆಗಿಲ್ಲ ,ಇದು ಪರಿಸರದ ಒಂದು ವಿಕೋಪವಾಗಿದೆ ಎಂದು ಎಚ್ಚರಿಸಿದರು.
ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಮೈಸೂರು ನಗರವು ತನ್ನ ಐತಿಹಾಸಿಕ ಪರಂಪರೆ ಪಳೆಯುಳಿಕೆಗಳನ್ನು ಉಳಿಸಿಕೊಂಡು ಬಂದಿದೆ. ಈಗಲೂ ಸಹ ಮೈಸೂರು ತನ್ನ ಇತಿಹಾಸವನ್ನು ಕಾಪಾಡಿಕೊಳ್ಳಬೇಕು. ಕೆಲವೊಂದು ಆಲೋಚನೆಗಳು ನಿಮ್ಮನ್ನು ಶಾಂತಿಯುತವಾಗಿರುವAತೆ ಮಾಡುತ್ತವೆ. ಮರಗಿಡಗಳನ್ನು ಬೆಳಸಿದರೆ ಪರಿಸರ ಶಾಂತವಾಗಿದ್ದು ಅವು ನಮ್ಮನ್ನು ಶಾಂತಿಯುತವಾಗಿ ಬದುಕಲು ಸಹಾಯಮಾಡುತ್ತವೆ ಎಂದು ತಿಳಿಸಿದರು.
ಇದೇ ವೇಳೆ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಪಬ್ಲಿಕ್ ಟಿ.ವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರಿಗೆ ಸಿರಿ ಸಂವರ್ಧನ ಪ್ರಶಸ್ತಿ, ಪರಿಸರ ತಜ್ಞರು ಮತ್ತು ಲೇಖಕರಾದ ಶಿವಾನಂದ ಕಳವೆ ಹಾಗೂ ಪರಿಸರ ಮತ್ತು ಶಿಕ್ಷಣ ತಜ್ಞರಾದ ವಿನಯ್ ರಾಮಕೃಷ್ಣ, ಹಾಗು ವನ್ಯಜೀವಿ ಪತ್ರಿಕೋದ್ಯಮಿಯಾದ ವಿನೋದ್ ಕುಮಾರ್ ಬಿ ನಾಯಕ್ ಅವರಿಗೆ ಸಿರಿ ಸಂವರ್ಧನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಮೈಸೂರು ನಗರಾಭಿವೃದ್ಧಿ ಅಧ್ಯಕ್ಷ ಹೆಚ್.ವಿ. ರಾಜೀವ್, ಆಯುಕ್ತ ದಿನೇಶ್ ಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್, ಮೈಸೂರು ನಗರಪಾಲಿಕೆ ಮೇಯರ್ ಸುನಂದಾ ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!