ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ ಶಿವ ನಿರ್ವಾಣದ ಲವ್ ರೊಮ್ಯಾಂಟಿಕ್ ಎಂಟರ್ಟೈನರ್ ʻಖುಷಿʼ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿ ದಾಖಲೆ ಕಲ್ಕ್ಷನ್ ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಈ ಸಂದರ್ಭದಲ್ಲಿ ಫ್ಯಾಮಿಲಿ ಆಡಿಯನ್ಸ್‌ಗೆ ಬಂಪರ್ ಉಡುಗೊರೆಯನ್ನು ನಟ ವಿಜಯ್ ದೇವರಕೊಂಡ ಘೋಷಿಸಿದ್ದಾರೆ. ಈಗಾಗಲೇ ಈ ಸಿನಿಮಾ ಮೂರು ದಿನದಲ್ಲಿ 70 ಕೋಟಿ ಕಲೆಕ್ಷನ್ ಮಾಡಿದ್ದು, ಚಿತ್ರತಂಡವು ವೈಜಾಗ್‌ನಲ್ಲಿ ಬ್ಲಾಕ್‌ಬಸ್ಟರ್ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. ವಿಜಯ್ ದೇವರಕೊಂಡ ಮತ್ತು ಚಿತ್ರತಂಡದ ಜೊತೆಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಿದ್ದರು.
ಈ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, ಸಿನಿಮಾ ಒಳ್ಳೆ ಕಲೆಕ್ಷನ್ ಆಗುತ್ತಿದ್ದು, ಫ್ಯಾಮಿಲಿ ಆಡಿಯನ್ಸ್ ಬರುತ್ತಿರುವುದರಿಂದ ಅವರಿಗಾಗಿ ಉಡುಗೊರೆ ನೀಡಲು ಇಚ್ಛಿಸಿದರು. ʻನೀವು ಸಿನಿಮಾ ಬಗ್ಗೆ ತೋರಿಸುತ್ತಿರುವ ಪ್ರೀತಿ, ಕಾಳಜಿಗೆ ತುಂಬಾ ಧನ್ಯವಾದ. ಹಣ ಸಂಪಾದಿಸಬೇಕು, ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಸಮಾಜದಲ್ಲಿ ಗೌರವದಿಂದ ಬಾಳಬೇಕು ಎಂದು ಮಾತ್ರ ಯೋಚಿಸುತ್ತಿದ್ದೆ. ಇವತ್ತು ಖುಷಿಯ ಜನಪ್ರಿಯತೆಯನ್ನು ನೋಡಿದಾಗ ನೀವೆಲ್ಲರೂ ನಾನು ಒಳ್ಳೆಯ ಚಿತ್ರ ಮಾಡುವುದನ್ನು ನೋಡಲು ಕಾಯುತ್ತಿದ್ದೀರಿ ಎಂದು ನನಗೆ ಅರ್ಥವಾಯಿತು. ನಿಮಗಾಗಿ ಏನಾದರೂ ಮಾಡಬೇಕು ಎಂದು ಅನಿಸುತ್ತಿದೆ. ನಾನು ನಿಮ್ಮೆಲ್ಲರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಿಲ್ಲ. ಆದ್ದರಿಂದ ನನ್ನ ನನ್ನ ʻಖುಷಿʼಯ ಸಂಪಾದನೆಯಿಂದ ಒಂದು ಕೋಟಿ ರೂಪಾಯಿಯನ್ನು ನಿಮಗೆ, ನನ್ನ ಕುಟುಂಬದೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆʼ ಎಂದರು.
ಶೀಘ್ರದಲ್ಲೇ ನೂರು ಕುಟುಂಬಗಳನ್ನು ಆಯ್ಕೆ ಮಾಡಿ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ನೀಡುತ್ತೇನೆ. ನನ್ನ ಸಂಪಾದನೆಯ ಜೊತೆಗೆ ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನೀವೆಲ್ಲರೂ ದೇವರಕೊಂಡ ಕುಟುಂಬದವರು. ನನ್ನ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಅರ್ಜಿಯನ್ನು ಹಾಕುತ್ತೇನೆ. ಅದನ್ನು ಭರ್ತಿ ಮಾಡಿ ಕಳಿಸಿದರೆ ಅದರಲ್ಲಿ 100ಲಕ್ಕಿ ಕುಟುಂಬಗಳನ್ನು ಆಯ್ಕೆ ಮಾಡಿ ಚೆಕ್ ವಿತರಿಸುವುದಾಗಿ ತಿಳಿಸಿದರು. ನಾನು ಕೊಡುವ ಹಣ ಕಷ್ಟಕ್ಕೆ ನೆರವಾದರೆ ಸಾಕು ಎಂದರು. ವಿಜಯ್ ಅವರ ಕಾಮೆಂಟ್ ಸದ್ಯ ವೈರಲ್ ಆಗಿದೆ.