October 21, 2026
Wednesday, October 21, 2026
spot_img

ವಿಜಯ್‌ ದೇವರಕೊಂಡ ʼರೆಡ್‌ ಫ್ಲಾಗ್‌ ʼ: ರಶ್ಮಿಕಾಗೆ ಇನ್ನೂ ಒಳ್ಳೆಯ ಹುಡುಗ ಸಿಗಬಹುದಿತ್ತಾ? ಚರ್ಚೆ ಆರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆಯ ನಂತರ ರಣಬಾಲಿ ಸಿನಿಮಾ ಪ್ರಮೋಷನ್ಸ್‌ ವೇಳೆ ಕೆಲವು ಸಂದರ್ಶನಗಳನ್ನು ನೀಡಿದ್ದರು. ಇದರಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ಇಬ್ಬರೂ ಓಪನ್‌ ಆಗಿ ಮಾತನಾಡಿದ್ದರು. ಈ ಮಾತುಕತೆಗಳ ನಂತರ ವಿಜಯ್‌ ದೇವರಕೊಂಡ ರೆಡ್‌ ಫ್ಲಾಗ್‌ ಎಂದು ನೆಟ್ಟಿಗರು ದೂಷಿಸಿದ್ದಾರೆ.

https://www.instagram.com/reel/Derlv0NtCdt/?xtok=MTIxMzU1YjFuY2U1Nw%3D%3D

ವಿಜಯ್‌ ನಾನು ಸುಮಾರು ವರ್ಷಗಳಿಂದ ಪ್ರೀತಿಯಲ್ಲಿ ಇದ್ದೀವಿ. ವಿಜಯ್‌ ಮದುವೆಯ ಬಗ್ಗೆ ಆಲೋಚನೆ ಮಾಡಿರಲಿಲ್ಲ. ನಾನು ಮದುವೆಗೆ ತಯಾರಾಗಿದ್ದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ವಿಜಯ್‌ ನನಗೆ ನನ್ನ ಕುಟುಂಬ ತುಂಬಾ ಇಷ್ಟ. ಅಪ್ಪ ಅಮ್ಮನಿಗೆ ಎಲ್ಲವನ್ನೂ ನೀಡಬೇಕು. ಅವರಿಗೆ ಟ್ರಾವೆಲ್‌ ಮಾಡುವ ಆಸೆ ಇದೆ. ನನ್ನ ಪೋಷಕರ ಎಲ್ಲ ಆಸೆಗಳನ್ನು ಈಡೇರಿಸುತ್ತೇನೆ, ಅವರಿಗೆ ದೇಶಗಳನ್ನು ಸುತ್ತಿಸುತ್ತೇನೆ ಎಂದು ತಮ್ಮ ಪರಿವಾರದ ಬಗ್ಗೆ ವಿಜಯ್‌ ಆಸಕ್ತಿಯಿಂದ ಮಾತನಾಡಿದ್ದಾರೆ. ಈ ವೇಳೆ ರಶ್ಮಿಕಾ ಮುಖ ಸಪ್ಪಗೆ ಕಾಣಿಸಿದೆ. ಈ ಟ್ರಾವೆಲ್‌ ಪ್ಲಾನ್‌ನಲ್ಲಿ ರಶ್ಮಿಕಾ ಕುಟುಂಬವನ್ನು ವಿಜಯ್‌ ಸೇರಿಸಿಕೊಂಡಿಲ್ಲ ಎಂದು ರಶ್ಮಿಕಾ ಫ್ಯಾನ್ಸ್‌ ಬೇಜಾರಾಗಿದ್ದಾರೆ.

ಇಷ್ಟೇ ಅಲ್ಲದೇ ಜನಪ್ರಿಯ ಬಾಲಿವುಡ್‌ ಶೋ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಕರಣ್‌, ನಿಮ್ಮ ಮದುವೆ ಆಗಿದ್ದು ಹೇಗೆ? ಯಾರು ಪ್ರಪೋಸ್‌ ಮಾಡಿದ್ದು ಎಂದು ಕೇಳಿದ್ದಾರೆ. ಆಗ ರಶ್ಮಿಕಾ ಪ್ರಪೋಸಲ್‌ ಅಂತೆಲ್ಲ ಇಲ್ಲ ಎಂದಿದ್ದಾರೆ. ಆಗ ವಿಜಯ್‌ ರಶ್ಮಿಕಾ ನೂರು ಬಾರಿಯಾದ್ರೂ ಮದುವೆ ಆಗೋಣ ಎಂದು ಹೇಳಿದ್ದರು ಎಂದಿದ್ದಾರೆ. ಇದಕ್ಕೆ ರಶ್ಮಿಕಾ ಹೌದು, ಒಂದು ವರ್ಷದಿಂದ ಮದುವೆ ಆಗೋಣ ಎಂದು ಕೇಳುತ್ತಲೇ ಇದ್ದೆ ಎಂದಿದ್ದಾರೆ. ಜೆನ್‌ಝೀಗಳಿಗೆ ಈ ವಿಷಯವೂ ಕೂಡ ಇಷ್ಟವಾಗಿಲ್ಲ. ರಶ್ಮಿಕಾ ನ್ಯಾಷನಲ್‌ ಕ್ರಶ್‌, ಕೋಟಿ ಕೋಟಿ ಒಡತಿ, ಒಳ್ಳೆಯ ಹೃದಯದ ಹುಡುಗಿ. ಇಷ್ಟೊಂದು ಪ್ರೀತಿಸುವ ಹುಡುಗಿಗೆ ಅವರಿಗಿಂತ ಹೆಚ್ಚು ಪ್ರೀತಿಸುವ ಹುಡುಗ ಸಿಗಬೇಕಿತ್ತು. ರಶ್ಮಿಕಾ ಇನ್ನೂ ಕಾದು ಗ್ರೀನ್‌ ಫ್ಲಾಗ್‌ನ್ನು ಮದುವೆಯಾಗಬೇಕಿತ್ತು ಎನ್ನುವುದು ಅವರ ಅಭಿಪ್ರಾಯವಾಗಿದೆ. ರಶ್ಮಿಕಾಗೆ ವಿಜಯ್‌ ಅಂದ್ರೆ ಇಷ್ಟ, ವಿಜಯ್‌ಗೂ ವಿಜಯ್‌ ಅಂದ್ರೆ ಇಷ್ಟ ಎಂದು ಜನ ಗೇಲಿ ಮಾಡಿದ್ದಾರೆ.

https://www.instagram.com/reel/DeuMG0aBxBx/?exln=czV0czFoMXUzYWxr

ರಶ್ಮಿಕಾಗೆ ಸೆಲ್ಫ್‌ ರೆಸ್ಪೆಕ್ಟ್‌ ಇಲ್ವಾ? ಮದುವೆ ವಿಡಿಯೋಗಳಲ್ಲಿ ನೋಡಿದ್ರೂ ವಿಜಯ್‌ ಹಾಗೂ ಅವರ ಪೋಷಕರೇ ಡಾಮಿನೇಟ್‌ ಮಾಡಿದ್ದಾರೆ. ರಶ್ಮಿಕಾ ಕುಟುಂಬಕ್ಕೆ ಆದ್ಯತೆ ನೀಡಿಲ್ಲ ಎಂದಿದ್ದಾರೆ. ಇನ್ನೂ ಹಲವರು ಅವರ ಮದುವೆ, ಅವರ ಪ್ರೀತಿ, ಅವರ ಜೀವನ ನಿಮಗೆ ಯಾಕೆ ಬೇಕು? ಇಷ್ಟೊಂದು ಫ್ರೀ ಸಮಯ ಇದೆಯಾ? ಸೋಶಿಯಲ್‌ ಮೀಡಿಯಾ ಬ್ಯಾನ್‌ ಆಗಬೇಕು. ಅವರಿವರ ಜೀವನದ ಬಗ್ಗೆ ಕಮೆಂಟ್‌ ಮಾಡೋದು ನಿಲ್ಲಬೇಕು ಎಂದೂ ಹೇಳಿದ್ದಾರೆ.


Must Read