Monday, August 8, 2022

Latest Posts

‌ʼಲೈಗರ್‌ʼ ಟ್ರೇಲರ್‌ ಲಾಂಚ್‌ ಗೆ 199 ರು. ಹವಾಯಿ ಚಪ್ಪಲಿ ಧರಿಸಿಬಂದ ವಿಜಯ್‌ ದೇವರಕೊಂಡ: ಕನ್ಫೂಸ್‌ ಆದ ರಣವೀರ್‌ ಸಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ನಟ ವಿಜಯ್ ದೇವರಕೊಂಡ ಮುಂಬರುವ ಚಿತ್ರ ‘ಲೈಗರ್’ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ಪೂರಿ ಜಗನ್ನಾಥ್-‌ ನಿರ್ಮಾಪಕ ಕರಣ್‌ ಜೋಹರ್ ಕಾಂಬಿನೇಶನ್‌ ನಲ್ಲಿ ಮೂಡಿಬರುತ್ತಿರುವ ಆಕ್ಷನ್-ಡ್ರಾಮಾ ಚಿತ್ರದ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಇರಿಸಿಕೊಂಡಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಲೈಗರ್’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ವಿಜಯ್‌ ದೇವರಕೊಂಡ ವಿಭಿನ್ನ ಲುಕ್‌ ನಲ್ಲಿ ಆಗಮಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತದೆ. ಈ ಕಾರ್ಯಕ್ರಮಕ್ಕೆ ದೇವರಕೊಂಡ ಸಾಮಾನ್ಯರ ಲುಕ್‌ ನಲ್ಲಿ ಬಂದಿದ್ದರು. ಕಪ್ಪು ಟೀ ಶರ್ಟ್ ಮತ್ತು ಕಾರ್ಗೋ ಪ್ಯಾಂಟ್ ಜೊತೆಗೆ ಹವಾಯಿ ಚಪ್ಪಲಿ ಧರಿಸಿ ಆಗಮಿಸಿದ ನಟನನ್ನು ನೋಡಿ ನೆರೆದಿದ್ದವರು ಅಚ್ಚರಿ ಪಟ್ಟರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ರಣವೀರ್ ಸಿಂಗ್‌ ಸಹ ದೇವರಕೊಂಡ ಲುಕ್‌ ನೋಡಿ ಒಂದು ಕ್ಷಣ ಕನ್ಫೂಸ್‌ ಆದರು.

ಬಳಿಕ ತಮಾಷೆಯಾಗಿ, “ವಿಜರ್‌ ದೇವರಕೊಂಡ ಅಣ್ಣನ ಸ್ಟೈಲ್ ನೋಡಿ, ನಾನು ಅವರ ಚಿತ್ರದ ಟ್ರೈಲರ್ ಬಿಡುಗಡೆಗೆ ಬಂದಿದ್ದೇನೋ ಇಲ್ಲಾ, ಅವರು ನನ್ನ ಸಿನಿಮಾದ ಟ್ರೈಲರ್ ಲಾಂಚ್‌ಗೆ ಬಂದಿದ್ದಾರೋ ಅನುಮಾನ ಕಾಡುತ್ತಿದೆ ಎಂದು ಕಾಲೆಳೆದರು.
ದೇವರಕೊಂಡ ವಿಭಿನ್ನ ಅವತಾರದ ಕುರಿತಾಗಿ ಅವರ ಸ್ಟೈಲಿಸ್ಟ್ ಹರ್ಮನ್ ಅವರು ಬಾಯ್ಬಿಟ್ಟಿದ್ದಾರೆ. ವಿಜಯ್‌ ದೇವರಕೊಂಡ ಚಿತ್ರದಲ್ಲಿ ಸಾಮಾನ್ಯ ವರ್ಗದ ಯುವಕನ ಪಾತ್ರವನ್ನು ಮಾಡಿದ್ದಾರೆ. ಇದಕ್ಕಾಗಿ ತಮ್ಮ ಪಾತ್ರಕ್ಕೆ ಹತ್ತಿರವಾಗುವಂತ ಲುಕ್ ನಲ್ಲಿ ಕಾಣಿಸಿಕೊಳ್ಳಲು ಇಷ್ಟಪಟ್ಟಿದ್ದರು. 199 ರೂ ಬೆಲೆಯ ಚಪ್ಪಲಿಗಳನ್ನು ನೀಡುವಾಗಿ ನಾನು ಹಿಂಜರಿಕೆಗೆ ಒಳಗಾಗಿದ್ದೆ. ಆದರೆ ವಿಜಯ್ ಅವರೇ ಧೈರ್ಯ ಹೇಳಿದರು. ಅವರ ಡ್ರೆಸ್ಸಿಂಗ್ ಕಲ್ಪನೆಗಳನ್ನು ನಾನು ಯಾವಾಗಲೂ ನಂಬುತ್ತೇನೆ ಏಕೆಂದರೆ ಆ ಕುರಿತು ದೇಶವ್ಯಾಪಿ ಚರ್ಚೆಯಾಗುತ್ತದೆ. ಈ ಲುಕ್‌ ನಲ್ಲಿ ವಿಜಯ್‌ ಸೊಗಸಾಗಿ ಕಾಣಿಸಿಕೊಂಡರು ಎಂದು ಸಂತಸ ವ್ಯಕ್ತಪಡಿಸಿದರು.
‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡ್ಯ ಮತ್ತು ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಮ್ಯಾ ಕೃಷ್ಣನ್, ರೋನಿತ್ ರಾಯ್ ಮತ್ತು ಮಕರಂದ್ ದೇಶಪಾಂಡೆ ತಾರಾಂಗಣದಲ್ಲಿದ್ದಾರೆ. ‘ಲೈಗರ್’ ಆಗಸ್ಟ್ 25, 2022 ರಂದು ಥಿಯೇಟರ್‌ಗಳಿಗೆ ಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss