Sunday, December 10, 2023

Latest Posts

CINE| ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟ ಹತ್ತಿದ ಲಿಯೋ ಚಿತ್ರತಂಡ, ಸಿನಿಮಾ ಹಿಟ್‌ಗಾಗಿಯೇ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೋಕೇಶ್ ಕನಕರಾಜ್ ಕೆಲವು ಚಿತ್ರಗಳ ಮೂಲಕ ಸ್ಟಾರ್ ನಿರ್ದೇಶಕ ಸ್ಥಾನಮಾನವನ್ನು ಗಳಿಸಿದರು. ಇಲ್ಲಿಯವರೆಗಿನ ಪ್ರತಿಯೊಂದು ಸಿನಿಮಾವೂ ಹಿಟ್ ಆಗಿದ್ದು, ಅವರ ಸಿನಿಮಾಗಳ ಬಗ್ಗೆ ಆಸಕ್ತಿಯೂ ಹೆಚ್ಚಿದೆ. ಸದ್ಯ ಲೋಕೇಶ್ ಕನಕರಾಜ್ ವಿಜಯ್ ಜೊತೆ ಲಿಯೋ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಹಿಂದೆ ಮಾಸ್ಟರ್ ಚಿತ್ರದ ಮೂಲಕ ವಿಜಯ್ ಗೆ ಹಿಟ್ ಕೊಟ್ಟಿದ್ದರು ಲೋಕೇಶ್.

ಅರ್ಜುನ್ ಸರ್ಜಾ, ಗೌತಮ್ ಮೆನನ್, ತ್ರಿಶಾ… ಹೀಗೆ ಹಲವು ತಾರಾಬಳಗವನ್ನಿಟ್ಟುಕೊಂಡು ಲೋಕೇಶ್‌ ಲಿಯೋ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಹುಟ್ಟಿಸಿದೆ. ದಸರಾ ಉಡುಗೊರೆಯಾಗಿ ಅಕ್ಟೋಬರ್ 19 ರಂದು ಲಿಯೋ ಚಿತ್ರ ಪ್ಯಾನ್ ಇಂಡಿಯಾ ಗ್ರ್ಯಾಂಡ್ ರಿಲೀಸ್ ಆಗಲಿದೆ. ಬಿಡಗಡೆಗೂ ಮುನ್ನವೇ ಚಿತ್ರತಂಡ ತಿರುಮಲ ತಿಮ್ಮಪ್ಪನ ಮೊರೆ ಹೋಗಿದ್ದು, ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದ್ದಾರೆ.

ಲೋಕೇಶ್ ಕನಕರಾಜ್ ತಮ್ಮ ತಂಡದೊಂದಿಗೆ ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ಮೆಟ್ಟಿಲು ಹತ್ತುವಾಗ ಸೆಲ್ಫಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಲೋಕೇಶ್ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.  ಲಿಯೋ ಭರ್ಜರಿ ಯಶಸ್ಸಿಗಾಗಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!