ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ರಾಘವೇಂದ್ರ ತಮ್ಮ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿದ್ದಾರೆ. ಹೃದಯಾಘಾತದಿಂದ ಸ್ಪಂದನಾ ಕೊನೆಯುಸಿರೆಳೆದಿದ್ದು, ಇದೇ ಮೊದಲ ಬಾರಿಗೆ ವಿಜಯ್ ಸ್ಪಂದನಾ ಬಗ್ಗೆ ಮಾತನಾಡಿದ್ದಾರೆ.
ಪತ್ನಿಯ ಬಗ್ಗೆ ತಾವೇ ಬರೆದ ನಾಲ್ಕು ಸಾಲುಗಳನ್ನು ತಮ್ಮದೇ ದನಿಯಲ್ಲಿ ಹಂಚಿಕೊಂಡಿದ್ದಾರೆ. ಸದಾ ಕಣ್ಣಿನಲ್ಲೇ ಪ್ರೀತಿ ತೋರುತ್ತಿದ್ದ ವಿಜಯ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸ್ಪಂದನಾ ಬಗ್ಗೆ ಮಾತನಾಡುತ್ತಿದ್ದರು.
ಸ್ಪಂದನಾ ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ
ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ
ನಮಗೆಂದೇ ಮಿಡಿದ ನಿನ್ನ ಹೃದಯವಮ ನಿಲ್ಲದು ನಿನ್ನೊಂದಿಗಿನ ಕಲರವ
ನಾನೆಂದೂ ನಿನ್ನವ ಕೇವಲ ನಿನ್ನವ ಎನ್ನುವ ಸಾಲುಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ಧ್ವನಿ ದುಃಖದಿಂದ ಗದ್ಗದಿತವಾಗಿದ್ದು, ಕಡೆಯಲ್ಲಿ ಪತ್ನಿ ಸ್ಪಂದನಾ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.
ಇಷ್ಟು ಅನ್ಯೂನ್ಯವಾಗಿದ್ದ ಜೋಡಿ ಮೇಲೆ ಕೆಟ್ಟ ಕಣ್ಣು ಬಿದ್ದು ಹೀಗಾಗಿದೆ, ವಿಜಯ್‌ಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
https://www.instagram.com/reel/CwEl7D4M8Fk/?utm_source=ig_web_copy_link&igshid=MzRlODBiNWFlZA==