October 10, 2026
Saturday, October 10, 2026
spot_img

ವಿಜಯ್-ತ್ರಿಶಾ ವಿವಾದ | ನಟಿ ಇದ್ದಿದ್ದರೆ ಇಷ್ಟು ಸಿಂಪಲ್ ಆಗಿ ತಗೊಳ್ತಿರ್ಲಿಲ್ಲ: ಗಾಯತ್ರಿ ಶಂಕರ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜಕೀಯದಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಚ್ಚರಿಯ ಗೆಲುವು ಇನ್ನೂ ಚರ್ಚೆಯ ಕೇಂದ್ರವಾಗಿರುವಾಗಲೇ, ಈಗ ಚಿತ್ರರಂಗದ ವಲಯದಲ್ಲಿ ಹೊಸ ವಿವಾದ ತಲೆದೋರಿದೆ. ವಿಜಯ್ ಗೆಲುವಿನ ಬಳಿಕ ನಟಿ ತ್ರಿಶಾಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದ ಶುಭಾಶಯಗಳ ಬಗ್ಗೆ ನಟಿ ಗಾಯತ್ರಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯ್ ಅವರ ರಾಜಕೀಯ ಯಶಸ್ಸಿನ ಬಳಿಕ ತ್ರಿಶಾ ಭೇಟಿ ನೀಡಿದ ಚಿತ್ರಗಳು ವೈರಲ್ ಆಗಿದ್ದು, ಅದಕ್ಕೆ ಹಲವರು ವಿಭಿನ್ನ ಅರ್ಥ ಕಲ್ಪಿಸಿದ್ದರು. ಈ ನಡುವೆ ಕೆಲವು ಮಂದಿ ವಿಜಯ್ ಅವರ ಗೆಲುವನ್ನು ತ್ರಿಶಾಗೆ ವಿಶೇಷ ಉಡುಗೊರೆ ಎಂದು ಹೇಳಿ ಶುಭಾಶಯ ಕೋರಿದ್ದೂ ಚರ್ಚೆಗೆ ಕಾರಣವಾಯಿತು. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಗಾಯತ್ರಿ, ಸಮಾಜದ ದ್ವಂದ್ವ ನಿಲುವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

ಒಬ್ಬ ಪುರುಷನ ವಿವಾಹೇತರ ಸಂಬಂಧವನ್ನು ಸಾಮಾನ್ಯವಾಗಿ ತೆಗೆದುಕೊಳ್ಳಲಾಗುತ್ತದೆ. ಆದರೆ ಇದೇ ಪರಿಸ್ಥಿತಿ ಮಹಿಳೆಯೊಬ್ಬಳಿಗೆ ಬಂದಿದ್ದರೆ ಸಮಾಜದ ಪ್ರತಿಕ್ರಿಯೆ ಸಂಪೂರ್ಣ ಬೇರೆ ಆಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರ ವಿಷಯದಲ್ಲಿ ತೀವ್ರ ಟೀಕೆ, ಅವಹೇಳನ ಮತ್ತು ಸಾಮಾಜಿಕ ಒತ್ತಡ ಹೆಚ್ಚಾಗುತ್ತಿತ್ತು ಎಂದು ಹೇಳಿದ್ದಾರೆ.

ಗಾಯತ್ರಿಯ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಕೆಲವರು ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Must Read