ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುರ್ಯ ಗುತ್ತು ಮನೆತನದ ಹಿರಿಯರಾದ ಜೈನ ಸಾಹಿತಿ, ಬಂಟ್ವಾಳ ತಾಲೂಕಿನ ಇರ್ವತ್ತೂರು ಬೀಡಿನ ವಿಜಯ ಜಿ. ಜೈನ್ ಇಂದು ಸ್ವಗ್ರಹದಲ್ಲಿ ನಿಧನ ಹೊಂದಿದರು.
ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಮಕ್ಕಳಾದ ಹಿರಿಯ ಪತ್ರಕರ್ತ ಐ.ಬಿ. ಸಂದೀಪ್ ಕುಮಾರ್, ಇರ್ವತ್ತೂರು ಮಾಗಣೆ ಗುರಿಕಾರ ಐ.ಬಿ. ಸಂಜೀತ್ ಕುಮಾರ್ ಮತ್ತು ಮಿಜಾರು ಅನಂತಮ್ ಮನೆಯ ಶಾಲಿನಿ ನವೀನ್ ಕುಮಾರ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಹಲವು ಕೃತಿಗಳ ಅರ್ಪಣೆ
ಅವರು ಜೈನ ‘ಭಕ್ತಿ ಸುಮನಾಂಜಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಡೆ ಅವರ ಯಶೋಗಾಥೆ, ಗೋಮಟೇಶ ಚರಿತೆ ಸಾಂಗತ್ಯ, ತುಳು ಭಾಷಾಂತರಿತ ಬೃಹತ್ ಸ್ವಯಂಭು ಸ್ತೋತ್ರ, ಜೈನ ಧರ್ಮದ ಧರ್ಮ ಗ್ರಂಥ ಮೋಕ್ಷ ಶಾಸ್ತ್ರ ಅವರ ಪ್ರಕಟಿತ ಕೃತಿಗಳು. ಜಿನ ಸಹಸ್ರ ನಾಮ, ಪದ್ಮ ಪುರಾಣ ಅವರ ಅಪ್ರಕಟಿತ ಕೃತಿಗಳು.
ಸಂಘಸಂಸ್ಥೆಗಳಲ್ಲೂ ಸಕ್ರಿಯ
ವಿವಿಧ ಸಂಘ ಸಂಸ್ಥೆಗಳಲ್ಲೂ ಸಕ್ರಿಯ ರಾಗಿದ್ದ ಅವರು ಕೆಲ ಕಾಲ ಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.