ಅರಮನೆಯಲ್ಲಿ ಸಂಭ್ರಮದ ವಿಜಯದಶಮಿ: ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು (ಅಕ್ಟೋಬರ್‌ 24) ರಾಜ್ಯಾದ್ಯಂತ ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ಗತವೈಭವ ಮರುಕಳಿಸಿದ್ದು, ಅಮರನೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ.

ಬೆಳಗ್ಗೆ 9.45ರಿಂ ಪೂಜೆಗಳು ಶುರುವಾಗಲಿದ್ದು, ಮೊದಲಿಗೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳನ್ನು ಕರೆತಂದು ಪೂಜೆ ನೆರವೇರಿಸಲಾಗುತ್ತದೆ. ನಂತರ ಬೆಳಗ್ಗೆ 11 ಗಂಟೆಗೆ ಅರಮನೆ ಆನೆ ಬಾಗಿಲಿನಿಂದ ಭುವನೇಶ್ವರಿ ದೇಗುಲದವರೆಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯದಶಮಿ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಈ ಮೆರವಣಿಗೆ 11.40ರವೆರಗೂ ನಡೆಯಲಿದ್ದು, ಮೆರವಣಿಗೆ ಬಳಿಕ ಮಹಾರಾಜರು ದೇಗುಲದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಪೂಜೆ ಸಲ್ಲಿಕೆ ಬಳಿಕ ಮಹಾರಾಜರು ಮೆರವಣಿಗೆಯಲ್ಲಿಯೇ ಅರಮನೆಗೆ ವಾಪಸಾಗುವ ಮೂಲಕ ಅರಮನೆಯ ದಸರಾ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

ಸಂಜೆ ಜಂಬೂಸವಾರಿ ಕಾರ್ಯಕ್ರಮಗಳು ಸಿದ್ಧವಾಗುತ್ತಿದ್ದು, ಅರಮನೆಯ ಬಲರಾಮ ದ್ವಾರದಲ್ಲಿರುವ ನಂದಿಧ್ವಜಕ್ಕೆ ಮಧ್ಯಾಹ್ನ 1.46ರಿಂದ ಪೂಜೆ ನೆರವೇರಲಿದೆ. ಜಂಬೂಸವಾರಿಗೂ ಮುನ್ನ ಸಿಎಂ ಸಿದ್ದರಾಮಯ್ಯ ಸುತ್ತೂರು ಮಠಕ್ಕೆ ಭೇಟಿ ಕೊಟ್ಟು, ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!