ಹೊಸದಿಗಂತ ವರದಿ, ವಿಜಯಪುರ
ಇಸ್ರೇಲ್‌ನಲ್ಲಿ ಸಿಲುಕಿದ ವಿಜಯಪುರ ಮೂಲದ ಸಹಾಯಕ ಪ್ರಾಧ್ಯಾಪಕ ನಗರಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಜೆರುಸೆಲಂ ನಿಂದ ವಿಮಾನ ಮೂಲಕ ಸ್ವದೇಶಕ್ಕೆ ಸುಮೇಶ್ ಗೋವಿಂದ ಆಗಮಿಸಿದ್ದು, ಅವರನ್ನು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಇಸ್ರೇಲ್‌ನಲ್ಲಿನ ಪರಿಸ್ಥಿತಿ ಹಂಚಿಕೊಂಡರು.
ಈ ವೇಳೆ ಡಿಸಿ ಭೂಬಾಲನ್ ಸುಮೇಶ್ ಅವರಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು.
ಸುಮೇಶ್ ವಿಜಯಪುರದ ಹಿಟ್ನಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.