ಹೊಸ ದಿಗಂತ ವರದಿ, ವಿಜಯಪುರ:
ಬೈಕ್ ಹಾಗೂ ಕಾರ್ ಡಿಕ್ಕಿಯಾಗಿ, ಬೈಕ್ ಸವಾರನಾದ ಮಾಜಿ ಗ್ರಾಪಂ ಸದಸ್ಯ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ಸಿಂದಗಿ ರಸ್ತೆಯ ಲಕ್ಷ್ಮಿ ದೇವಸ್ಥಾನ ಬಳಿ ನಡೆದಿದೆ.
ಮೃತಪಟ್ಟವನನ್ನು ಹಡಗಲಿ ತಾಂಡಾ ನಿವಾಸಿ ಮೋಹನ್ ತಾರಾಸಿಂಗ್ ರಾಠೋಡ (42) ಎಂದು ಗುರುತಿಸಲಾಗಿದೆ.
ಮೋಹನ್ ರಾಠೋಡ ಈತ, ವಿಜಯಪುರದಿಂದ ಬೈಕ್ ಮೇಲೆ ಹಡಗಲಿ ಎಲ್ ಟಿ ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.