ಹೊಸದಿಗಂತ ವರದಿ, ವಿಜಯಪುರ:
ಕೊಲೆ ಯತ್ನ ಪ್ರಕರಣದ ಆರೋಪಿಗೆ 4 ನೇ ಹೆಚ್ಚುವರಿ ಸತ್ರ ನ್ಯಾಯಾಲಯ 12 ವರ್ಷ ಶಿಕ್ಷೆ ಹಾಗೂ 68 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಇಲ್ಲಿನ ಖಾಜಾ ನಗರದ ಮಹಮ್ಮದ್ ಇಬ್ರಾಹಿಮ್ ಉಕ್ಕಲಿ ಶಿಕ್ಷೆಗೊಳಗಾದ ಆರೋಪಿ.
ಮಹಮ್ಮದ್ ಇಬ್ರಾಹಿಮ್ ಉಕ್ಕಲಿ ಈತ ಕೊಲೆಗೆ ಯತ್ನ ನಡೆಸಿರುವ ಬಗ್ಗೆ ಇಲ್ಲಿನ ಗಾಂಧಿಚೌಕ್ ಪೊಲೀಸ್ ಠಾಣೆ ಪ್ರಕರಣ ಪ್ರಕರಣ ದಾಖಲಾಗಿತ್ತು, ಈ ಸಂಬಂಧ ಪಿಎಸ್ ಐ ಆರೀಫ್ ಮುಶಾಪೂರಿ, ಪ್ರಕರಣದ ತನಿಖೆ ಕೈಕೊಂಡು, ಇದರಲ್ಲಿ ಆರೋಪಿತನಾದ ಮಹಮ್ಮದ ಇಬ್ರಾಹಿಮ್ ಉಕ್ಕಲಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಾದ, ಪ್ರತಿವಾದ ಆಲಿಸಿದ 4ನೇ ಹೆಚ್ಚುವರಿ ಸತ್ರ ನ್ಯಾಯಾಲಯ, ಆರೋಪಿ ಮಹಮ್ಮದ್ ಇಬ್ರಾಹಿಮ್ ಉಕ್ಕಲಿ ಈತನಿಗೆ ಒಟ್ಟು 12 ವರ್ಷ ಶಿಕ್ಷೆ ಮತ್ತು 68 ಸಾವಿರ ರೂ.ಗಳ ದಂಡವನ್ನು ವಿಧಿಸಿದ್ದು, ದಂಡ ಭರಿಸದೇ ಇದ್ದಲ್ಲಿ ಹೆಚ್ಚುವರಿಯಾಗಿ 3 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಜಕ ವಿರೇಶ ಮಹಾಮನಿ ವಾದ ಮಂಡಿಸಿದ್ದಾರೆ.