ಸ್ಕ್ರೀನ್ ಮೇಲೆ ಕಮಾಲ್ ಮಾಡಿ OTT ಗೆ ಅಬ್ಬರಿಸಲು ಬಂದ ವಿಕ್ರಾಂತ್ ರೋಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಿಚ್ಚ ಸುದೀಪ್ ಅಭಿನಯದ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸುತ್ತಿರೋ ಸಿನಿಮಾ ವಿಕ್ರಾಂತ್ ರೋಣ ಇದೀಗ ಒಟಿಟಿಗೂ ಲಗ್ಗೆ ಇಡಲು ತಯಾರಾಗಿದೆ.

ಜುಲೈ 28ರಿಂದ ವಿಶ್ವದಾದ್ಯಂತ 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರೋ ಸಿನಿಮಾ. ಮೊದಲ ದಿನವೇ ಬಾಕ್ಸ್ ಆಫೀಸ್​​ನಲ್ಲಿ ಕೊಳ್ಳೆ ಹೊಡೆದಿತ್ತು.

ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚನ ಕಾಂಬಿನೇಷನ್ ಬಂದ ವಿಕ್ರಾಂತ್ ರೋಣ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿ ಈ ವರ್ಷ ಬ್ಲಾಕ್ ಬಸ್ಟರ್ ಮೂವಿ ಎನಿಸಿಕೊಂಡಿದೆ.

ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಜನ್ಮ ದಿನ. ಅಂದು ಪ್ರತಿಷ್ಠಿತ ಒಟಿಟಿ ಜೀ5ನಲ್ಲಿ ವಿಕ್ರಾಂತ್ ರೋಣ ಚಿತ್ರ ಪ್ರಸಾರವಾಗಲಿದೆ. ಅದಕ್ಕೂ ಮುನ್ನ ಜೀ5 ಸ್ಪೆಷಲ್ ಟ್ರೈಲರ್ ಅನ್ನು ಅನಾವರಣ ಮಾಡಲಿದೆ‌. ಕನ್ನಡದಲ್ಲಿ ಮಾತ್ರ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ನಂತರ ಬೇರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್​ ಸುದೀಪ್ ಜೊತೆಗೆ ಹೆಜ್ಜೆ ಹಾಕಿದ್ದ ರಾ ರಾ ರಕ್ಕಮ್ಮ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿದೆ. ನಿರೂಪ್​ ಭಂಡಾರಿ, ನೀತಾ ಅಶೋಕ್​, ಮಿಲನ ನಾಗರಾಜ್​, ​ ಮಧುಸೂದನ್​ ರಾವ್​, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ‌. ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನ,‌ ಮಿಲಿಯಂ‌ ಡೇವಿಡ್ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!