ನಾನು ಬೆಂಗಳೂರಿಗೆ ಬರ್ತೀನಿ: ರಕ್ಕಮ್ಮ ಜಾಕ್ವೆಲಿನ್​​ಗೆ ಕನ್ನಡ ಹೇಳಿಕೊಟ್ಟ ವಿಕ್ರಾಂತ್ ರೋಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಸಿನಿಮಾ ರಂಗದಲ್ಲಿ ಸಖತ್ ಹವಾ ಸೃಷ್ಟಿಸಿರುವ ವಿಕ್ರಾಂತ್ ರೋಣ ಸಿನಿಮಾ ಇದೀಗ ಹಾಡುಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ಆಗಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರದ, ರಾ ರಾ ರಕ್ಕಮ್ಮ ಹಾಡಿನ ಲಿರಿಕಲ್ ವಿಡಿಯೋ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿ,‌ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್​ಗಟ್ಟಲೆ ಜನರು ನೋಡಿ ಮೆಚ್ಚಿಕೊಂಡಿದ್ದಾರೆ‌.

ಈ ಹಾಡಿನಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ರಾ ರಾ ರಕ್ಕಮ್ಮ, ಎಂಬ ಕ್ಯಾಚೀ ನಂಬರ್ ಹಾಡಿಗೆ ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದು, ಸೊಂಟ ಬಳಕಿಸಿದ್ದು,ಕಿಚ್ಚನ ಜೊತೆ ಕಿಕ್ಕೇರಿಸುವ ಲುಕ್​​​ನಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಇದೀಗ ಕಿಚ್ಚ ಸುದೀಪ್ ವಿಡಿಯೋ ಕಾಲ್ ಮಾಡಿ ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಜಾಕ್ವೆಲಿನ್​ಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಸುದೀಪ್ ಹೇಳಿಕೊಟ್ಟಂತೆ ಸ್ವಲ್ಪ ದಿನಗಳಲ್ಲಿ ನಾನು ಬೆಂಗಳೂರಿಗೆ ಬರ್ತೀನಿ ಅಂತಾ ಜಾಕ್ವೆಲಿನ್​ ಹೇಳಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅವರ ಅದ್ಧೂರಿ ಬಜೆಟ್​​ನಲ್ಲಿ ಈ‌ ಸಿನಿಮಾ ನಿರ್ಮಾಣ ಆಗಿದೆ. 14 ಭಾಷೆಗಳಲ್ಲಿ ತೆರೆಗೆ ಬರಲಿರುವ ವಿಕ್ರಾಂತ್ ರೋಣ ಫ್ರೆಂಚ್, ಅರೆಬಿಕ್, ಸ್ಪ್ಯಾನಿಷ್, ಮಂಡರಿನ್ ಮತ್ತು ರಷ್ಯಾ ಭಾಷೆಗಳಿಗೂ ಕೂಡ ಡಬ್ ಆಗಲಿದೆ. ಜೂನ್ 28ಕ್ಕೆ ವಿಶ್ವಾದ್ಯಂತ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!