Tuesday, July 5, 2022

Latest Posts

ಬೆಳ್ಳೆಯಲ್ಲಿ `ಗ್ರಾಮ ಒನ್’ ನಾಗರಿಕ ಸೇವಾ ಕೇಂದ್ರ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್

ಸರಕಾರದ ವಿವಿಧ ಯೋಜನೆಗಳ ಸಮಗ್ರ ಮಾಹಿತಿ ಹಾಗೂ ಸೇವೆಯನ್ನೊದಗಿಸುವ ನಾಗರಿಕ ಸೇವಾ ಕೇಂದ್ರ `ಗ್ರಾಮ ಒನ್’ ಕೇಂದ್ರ ಉಡುಪಿಯ ಮೂಡುಬೆಳ್ಳೆಯ ಫೆರ್ನಾಂಡಿಸ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು.
ಮೂಡುಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಾರ್ವಜನಿಕರು ಸರಕಾರದ ವಿವಿಧ ಸೇವೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿರುವ ಈ ಕೇಂದ್ರ ಯಶಸ್ಸು ಕಾಣಲಿ. ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ ವೇತನ, ಹಿರಿಯ ನಾಗರಿಕರ ಗುರುತಿನ ಚೀಟಿ, ಸಂಧ್ಯಾ ಸುರಕ್ಷಾ ಯೋಜನೆ, ಪಶು ಸಂಗೋಪನೆ ಇಲಾಖೆಯ ಯೋಜನೆಗಳು, ಕಂದಾಯ ಇಲಾಖೆಯ ಎಲ್ಲಾ ಸೇವೆಗಳು ಸೇರಿದಂತೆ ನೂರಕ್ಕೂ ಅಧಿಕ ನಾಗರಿಕ ಸೇವೆಗಳು ಈ ಕೇಂದ್ರದಲ್ಲಿ ಲಭ್ಯವಿರಲಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಆರ್. ಜಿ., ಗ್ರಾಮ ಕರಣಿಕರಾದ ಪ್ರದೀಪ್ ಕುಮಾರ್, ಕಾರ್ಯದರ್ಶಿ ವಸಂತಿ ಬಾಯಿ, ಪಂಚಾಯತ್ ಸದಸ್ಯರಾದ ರಾಜೇಂದ್ರ ಶೆಟ್ಟಿ, ಬೆಳ್ಳೆ ಸಿ.ಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್ ಸುವರ್ಣ, ಉಡುಪಿ ಜಿ.ಪಂ.ಮಾಜಿ ಸದಸ್ಯರಾದ ಐಡಾ ಗಿಬ್ಬ ಡಿಸೋಜ, ತಾ.ಪಂ. ಮಾಜಿ ಸದಸ್ಯೆ ಸುಜಾತಾ ಎಸ್.ಸುವರ್ಣ, ಕಟ್ಟಡದ ಮಾಲಕರಾದ ಜೆರಾಲ್ಡ್ ಫೆರ್ನಾಂಡಿಸ್, ಪತ್ರಕರ್ತರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಹರೀಶ್ ಶೆಟ್ಟಿ ಕಕ್ರಬೆಟ್ಟು, ನಿವೃತ್ತ ಶಿಕ್ಷಕಿ ರಾಧಾ ಟೀಚರ್, ಶಿಕ್ಷಕ ರಾಜೇಂದ್ರನಾಥ್, ಗಿಬ್ಬ ಡಿಸೋಜ ಉಪಸ್ಥಿತರಿದ್ದರು.
ಗ್ರಾಮ ಒನ್‌ನ ಪ್ರಾಂಚೈಸಿ ರಘುಶ್ಚಂದ್ರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss