ವಿಜಯನಗರ ವಿಮ್ಸ್‌ನಲ್ಲಿ 93 ಹುದ್ದೆಗಳ ನೇಮಕಾತಿ: ಜೂ.22ರಂದು ನೇರ ಸಂದರ್ಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬಳ್ಳಾರಿಯಲ್ಲಿ ವಿವಿಧ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ.

ಹುದ್ದೆಗಳ ವಿವರ

ಪ್ರಾಧ್ಯಾಪಕರು : 07
ಸಹ ಪ್ರಾಧ್ಯಾಪಕರು : 23
ಸಹಾಯಕ ಪ್ರಾಧ್ಯಾಪಕರು : 57
ತುರ್ತು ಚಿಕಿತ್ಸಾ ವೈಧ್ಯಾಧಿಕಾರಿಗಳು : 06
ಒಟ್ಟು : 93

ಅರ್ಹತೆ

ಭಾರತೀಯ ವೈದ್ಯಕೀಯ ಪರಿಷತ್ತಿನ (ಎನ್‌ಎಂಸಿ) ಪ್ರಸ್ತುತ ಶಿಕ್ಷಕ ಅರ್ಹತಾ ಮಾನದಂಡದ ಮೇರೆಗೆ ಅರ್ಹತೆ, ವಯೋಮಿತಿ, ಪದವಿ, ಅನುಭವ ಹಾಗೂ ಇನ್ನಿತರ ವಿವರಗಳನ್ನು ವಿಮ್ಸ್‌ ಅಂತರ್ಜಾಲದಲ್ಲಿ ಚೆಕ್‌ ಮಾಡಬಹುದು.

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಮಿಂಚಂಚೆ (ಇ-ಮೇಲ್) ಮೂಲಕ ಈ ಕೆಳಗೆ ನಮೂದಿಸಿದ ಮಿಂಚಂಚೆ ವಿಳಾಸ [email protected] / https://vims.karnataka.gov.in ಗೆ ಅಥವಾ ನೊಂದಾಯಿಸಿದ ಅಂಚೆ ಮೂಲಕ ವಿಳಾಸ – ನಿರ್ದೇಶಕರು, ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ದಂಡು ಪ್ರದೇಶ, ಬಳ್ಳಾರಿಗೆ ಜೂನ್‌ 19,2023ರೊಳಗೆ ಅರ್ಜಿ ಸಲ್ಲಿಸಬಹುದು.

ನೇರ ಸಂದರ್ಶನ ದಿನಾಂಕ: 22-06-2023 ರಂದು ಬೆಳಿಗ್ಗೆ 11-00 ಗಂಟೆಯಿಂದ.

ನೇರ ಸಂದರ್ಶನ ಸ್ಥಳ : ನಿರ್ದೇಶಕರು, ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಆಡಳಿತ ಕಛೇರಿ ವಿಭಾಗ, ಬಳ್ಳಾರಿ.

ನೇರ ಸಂದರ್ಶನಕ್ಕೆ ಹಾಜರಾಗುವ ಅರ್ಹ ಅಭ್ಯರ್ಥಿಗಳು ದಿನಾಂಕ 22-06-2023 ರಂದು ಬೆಳಿಗ್ಗೆ 08-30ಕ್ಕೆ ದಾಖಲೆಗಳ ಪರಿಶೀಲನೆಗೆ ವರದಿ ಮಾಡಿಕೊಳ್ಳಬೇಕಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!