ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಂಗ್ ಹಿಡಿದು ರೀಲ್ಸ್ ಮಾಡಿದ ವಿನಯ್ ಗೌಡ, ರಜತ್‌ಗೆ ಸಂಕಷ್ಟ ಎದುರಾಗಿದೆ. ಇಂದು ಪೊಲೀಸ್ ಠಾಣೆಗೆ ಹಾಜರಾದ ಆರೋಪಿ ವಿನಯ್, ರಜತ್ ಇಬ್ಬರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.
ಠಾಣೆಯಲ್ಲಿ ಕೆಲ ಹೊತ್ತು ವಿಚಾರಣೆ ನಡೆಸಿದ ಪೊಲೀಸರು , ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಆರೋಪಿಗಳ ಮುಂದೆಯೇ ಸ್ಥಳ ಮಹಜರು ಮಾಡಿದ್ದಾರೆ.
ಮಹಜರು ನಂತರ ಪೊಲೀಸರಿಗೆ ಆರೋಪಿಗಳು ನೀಡಿದ ಹೇಳಿಕೆ ಹಾಗೂ ಜಪ್ತಿ ಮಾಡಿರುವ ಆಯುಧದ ಮೇಲೆ ಅನುಮಾನ ಬಂದ್ರೆ ಈ ಪ್ರಕರಣದಲ್ಲಿ ಸಾಕ್ಷನಾಶ ಸೆಕ್ಷನ್ ಹಾಕುವ ಸಾಧ್ಯತೆ ಇದೆ. ಸದ್ಯ ಸ್ಥಳ ಮಹಜರು ಪ್ರಕ್ರಿಯೆ ನಡೆದಿದ್ದು, ಪೊಲೀಸರ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಈ ವೇಳೆ, ಮಹಜರಿನ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.