ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆ ಪಿ.ಟಿ.ಉಷಾರವರು ನನಗೆ ಯಾವುದೇ ಬೆಂಬಲವನ್ನು ನೀಡಲಿಲ್ಲ. ರಾಜಕೀಯ ನಡೆಸುತ್ತಿದ್ದಾರೆ ಎಂದು ವಿನೇಶ್ ಫೋಗಟ್ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಅವರು,ನಾನು ಆಸ್ಪತ್ರೆಯಲ್ಲಿದ್ದಾಗ ಪಿ.ಟಿ ಉಷಾ ಮೇಡಂ ಭೇಟಿ ಮಾಡಿದರು. ಒಂದು ಫೋಟೋ ಕ್ಲಿಕ್ಕಿಸಿದರು. ನನ್ನ ಅನುಮತಿ ಪಡೆದಿರಲಿಲ್ಲ ಎಂದ ವಿನೇಶ್ ಅವರು, ರಾಜಕೀಯದಲ್ಲಿ ಬಹಳಷ್ಟು ನಡೆಯುತ್ತದೆ. ಪ್ಯಾರಿಸ್‌ನಲ್ಲಿಯೂ ರಾಜಕೀಯ ನಡೆದಿದೆ. ಕ್ರೀಡೆಯನ್ನು ಬಿಡಬೇಡ ಎಂದು ತುಂಬಾ ಮಂದಿ ಹೇಳಿದರು. ಆದರೆ ಎಲ್ಲಾ ಕಡೆ ರಾಜಕೀಯ ಇರುವಾಗ ಅದರಲ್ಲಿ ನಾನು ಮುಂದುವರೆಯುವುದು ಸರಿಯಲ್ಲ ಎನ್ನಿಸಿತು ಎಂದು ಈಗ ರಾಜಕೀಯ ಪ್ರವೇಶಿಸಿರುವ ವಿನೇಶ್ ಫೋಗಟ್ ಹೇಳಿದ್ದಾರೆ.
ಉಷಾ ಅವರು ನನಗೆ ಸಪೋರ್ಟ್ ಮಾಡುವುದಾಗಿ ಹೇಳಿದರು. ಆದರೆ ಎಲ್ಲಿಯೂ ನನಗೆ ಸಪೋರ್ಟ್ ಸಿಗಲಿಲ್ಲ. ಎಲ್ಲವೂ ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ.