ರಾಜಕೀಯಕ್ಕೆ ವಿನೇಶ್ ಫೋಗಟ್: ಕಾಂಗ್ರೆಸ್‌ ನತ್ತ ಮುಖಮಾಡಿದ ಕುಸ್ತಿಪಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಸ್ತಿಪಟು ವಿನೇಶ್ ಫೋಗಟ್ ಅವರು ಕ್ರೀಡೆಯಿಂದ ರಾಜಕೀಯದತ್ತ ಮುಖಮಾಡಿದ್ದು, ಕಾಂಗ್ರೆಸ್​ ಪಕ್ಷ ಸೇರಿ, ಮುಂಬರುವ ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು 2 ದಿನಗಳ ಹಿಂದೆ ಭಾರೀ ಚರ್ಚೆಯಾಗಿತ್ತು. ಇದೀಗ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದೆ.

ವಿನೇಶ್​ ಶುಕ್ರವಾರ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಇದೇ ವೇಳೆ ಹೂಡಾ ಯಾರೇ ಕಾಂಗ್ರೆಸ್‌ಗೆ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಇದನೆಲ್ಲ ಗಮನಿಸುವಾಗ ವಿನೇಶ್​ ಕಾಂಗ್ರೆಸ್​ ಪಕ್ಷ ಸೇರುವುದು ನಿಶ್ಚಿತವಾದಂತಿದೆ.

ಕ್ರೀಡಾಪಟು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ರಾಜ್ಯಕ್ಕೆ ಸೇರಿದವರಲ್ಲ. ಒಬ್ಬ ಕ್ರೀಡಾಪಟು ಇಡೀ ರಾಷ್ಟ್ರಕ್ಕೆ ಸೇರಿದವರು. ವಿನೇಶ್​ ಇಡೀ ರಾಷ್ಟ್ರಕ್ಕೆ ಸೇರಿದವಳು. ಯಾವ ಪಕ್ಷಕ್ಕೆ ಸೇರಬೇಕು ಬೇಡ ಎಂಬುದು ಅವರ ಆಯ್ಕೆ. ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ. ಅವಳು ಏನು ಮಾಡಬೇಕೆಂದು ಬಯಸುತ್ತಾಳೆ ಎಂಬುದು ಅವಳ ನಿರ್ಧಾರ ಎಂದು ಹರಿಯಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹೂಡಾ ಹೇಳಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಪದಕ ನಿರೀಕ್ಷೆಯಲ್ಲಿದ್ದ ವಿನೇಶ್​ ಫೈನಲ್​ ಪಂದ್ಯಕ್ಕೆ ಕೆಲವೆ ಗಂಟೆಗಳು ಇರುವಾಗ ನಿಯಮಿತ ತೂಕಕ್ಕಿಂತ ಹೆಚ್ಚು ಇದ್ದ ಕಾರಣ ಅನರ್ಹಗೊಂಡು ಪದಕ ವಂಚಿತರಾದರು. ಅನರ್ಹತೆಯ ವಿರುದ್ಧ ಅವರು ಸಲ್ಲಿದ್ದ ಮನವಿಯನ್ನು ಕೂಡ ಆರ್ಬಿಟ್ರೇಶನ್ ಕೋರ್ಟ್ (CAS) ತಿರಸ್ಕರಿಸಿದೆ.

ಮೂಲಗಳ ಪ್ರಕಾರ ಮೂಲಗಳ ವಿನೇಶ್​ ಅವರು ತಮ್ಮ ಸೋದರ ಸಂಬಂಧಿ, ಮಾಜಿ ಕಾಮನ್​ವೆಲ್ತ್​ ಗೇಮ್​ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ವಿನೇಶ್​ ಮಾತ್ರವಲ್ಲದೆ ಬಜರಂಗ್​ ಪೂನಿಯಾ ಕೂಡ ಕಾಂಗ್ರೆಸ್​ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ ಎನ್ನಲಾಗಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಕಳೆದ ಶುಕ್ರವಾರ ಚುನಾವಣೆ ದಿನಾಂಕ ಘೋಷಣೆ ಮಾಡಿತ್ತು. ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!