ಹೊಸದಿಗಂತ ಡಿಜಿಟಲ್ ಡೆಸ್ಕ್;
ಕುಸ್ತಿಪಟು ವಿನೇಶ್ ಫೋಗಟ್ ಅವರ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಇನ್ನೂ ಮುಂದೂಡಲ್ಪಟ್ಟಿದೆ. ಈ ಮೊದಲು ಇಂದು ಭಾರತೀಯ ಕಾಲಮಾನ ರಾತ್ರಿ 9.30 ಕ್ಕೆ ತೀರ್ಮಾನ ನೀಡಲಾಗುವುದು ಎಂದು ವರದಿಯಾಗಿತ್ತು. ಇದೀಗ ಇನ್ನೊಂದು ದಿನ ಅಂದರೆ ಆಗಸ್ಟ್ 11ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದೆ.
ನ್ಯಾಯಮೂರ್ತಿ ಡಾ. ಅನಾಬೆಲ್ ಬೆನೆಟ್ ಈ ಮಹತ್ವದ ಘೋಷಣೆ ಮಾಡಿದೆ. ಇಂದು ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಫೋಗಟ್, ಅವರ ಕಾಯುವಿಕೆ ಮುಂದೂಡಲ್ಪಟ್ಟಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆ.ಜಿ ವಿಭಾಗದ ಪ್ರಿಸ್ಟೈಲ್ ಕುಸ್ತಿ ಪಂದ್ಯದಲ್ಲಿ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ 100 ಗ್ರಾಮ್ ಹೆಚ್ಚು ತೂಕ ಹೊಂದಿದ್ದರಿಂದ ವಿಶ್ವ ಕುಸ್ತಿ ಸಂಸ್ಥೆ, ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿತ್ತು.
ನಾಳೆ ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ವಿನೇಶ್ ಫೋಗಟ್ ಪದಕ ಭರವಸೆ ನಿರ್ಧಾರವಾಗಲಿದೆ ಎಂದು ವರದಿಯಾಗಿದೆ.