ನೀತಿ ಸಂಹಿತೆ ಉಲ್ಲಂಘನೆ: 1232 ಲೀಟರ್ ಮದ್ಯ ವಶ

ಹೊಸದಿಗಂತ ವರದಿ,ಕೊಪ್ಪಳ:

ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ತಂಡಗಳು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗಳಿಂದ ಕಾರ್ಯಾಚರಣೆ ಮುಂದುವರೆದಿದೆ.
ಮಾರ್ಚ 19ರಿಂದ ಇಲ್ಲಿವರೆಗೆ ಕೊಪ್ಪಳ ಜಿಲ್ಲೆಯಲ್ಲಿ 4,07,100 ರೂ ಹಣ ವಶಕ್ಕೆ ಪಡೆಯಲಾಗಿದೆ. 226 ಸೀರೆಗಳು, 107 ಟೀಶರ್ಟ್ಸ ಮತ್ತು 170 ಗ್ಯಾಸ್ ಸ್ಟೌವ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆ ಸಂಬAಧ ಫ್ಲೆöÊಯಿಂಗ್ ಸ್ಕಾ÷್ವಡ್ ತಂಡಗಳಿAದ 08 ಎಫ್.ಐ.ಆರ್‌ಗಳು ದಾಖಲಾಗಿವೆ.
ಏಪ್ರೀಲ್ 12ರಂದು 210.16 ಲೀ ಮೌಲ್ಯದ ಮದ್ಯೆ ವಶ ಸೇರಿದಂತೆ ಮಾರ್ಚ 29ರಿಂದ ಇಲ್ಲಿಯವರೆಗೆ ಒಟ್ಟು 5,70,752.19 ರೂ.ಮೌಲ್ಯದ 1232.66 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!