ಕೋವಿಡ್-19 ನಿಯಮ ಉಲ್ಲಂಘನೆ: ಕೋರ್ಟ್‌ ವಿಚಾರಣೆಗೆ ಸಂಜಯ್ ಸಿಂಗ್ ಗೈರು

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕೋವಿಡ್-19 ನಿಯಮ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡ ಹಾಗೂ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್, ಈ ಕುರಿತು ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶನಿವಾರ ಗೈರು ಹಾಜರಾಗಿದ್ದಾರೆ.

ತಮ್ಮ ಕಕ್ಷಿದಾರ ಸಂಸತ್ತಿನ ಕಲಾಪದಲ್ಲಿ ತೊಡಗಿರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಅವರ ಪರ ವಕೀಲರು ಸಂಸದರ-ಶಾಸಕರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದ ಮುಂದಿನ ವಿಚಾರಣೆಗೆ ಜುಲೈ 6 ಅನ್ನು ನಿಗದಿಪಡಿಸಲಾಗಿದೆ.

ಜೂನ್ 21ರಂದು ಈ ಕುರಿತು ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯವು, ವಿಚಾರಣೆಗೆ ಹಾಜರಾಗುವುದರಿಂದ ನಿರಂತರವಾಗಿ ತಪ್ಪಿಸಿಕೊಳ್ಳುತ್ತಿರುವ ಸಂಜಯ್ ಸಿಂಗ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!