Wednesday, November 29, 2023

Latest Posts

ವಿದೇಶಿ ದೇಣಿಗೆ ಕಾನೂನು ಉಲ್ಲಂಘನೆ: ಬೈಜೂಸ್ ಗೆ 9 ಸಾವಿರ ಕೋಟಿ ಪಾವತಿಗೆ ಇಡಿ ನೊಟೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿದೇಶಿ ದೇಣಿಗೆ ಕಾನೂನನ್ನು ಉಲ್ಲಂಘನೆ ಮಾಡಿದ ಆರೋಪದಡಿ ಎಡ್ಟೆಕ್ ದೈತ್ಯ ಬೈಜೂಸ್ ಗೆ 9 ಸಾವಿರ ಕೋಟಿ ರೂಪಾಯಿ ಪಾವತಿಸುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿಗೊಳಿಸಿದೆ.

ಆದರೆ ಬೈಜೂಸ್ ಮಾತ್ರ ತನಗೆ ಜಾರಿ ನಿರ್ದೇಶನಾಲಯದಿಂದ ನೊಟೀಸ್ ಬಂದಿರುವುದನ್ನು ನಿರಾಕರಿಸಿದೆ.

ಜಾರಿ ನಿರ್ದೇಶನಾಲಯದ ಮೂಲಗಳ ಪ್ರಕಾರ, ಬೈಜು 2011 ಮತ್ತು 2023 ರ ನಡುವೆ ಸುಮಾರು ₹ 28,000 ಕೋಟಿ ವಿದೇಶಿ ನೇರ ಹೂಡಿಕೆಯನ್ನು (ಎಫ್ಡಿಐ) ಸ್ವೀಕರಿಸಿದೆ. ಎಡ್ಟೆಕ್ ಪ್ರಮುಖ ಸಂಸ್ಥೆ, ಇದೇ ಅವಧಿಯಲ್ಲಿ ಸಾಗರೋತ್ತರ ನೇರ ಬಂಡವಾಳದ ಹೆಸರಿನಲ್ಲಿ ಸುಮಾರು 9,754 ಕೋಟಿ ಹಣವನ್ನು ರವಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!