Tuesday, May 30, 2023

Latest Posts

ಆರ್‌ಬಿಐ ನಿಯಮ ಉಲ್ಲಂಘನೆ: ಆರ್‌ಬಿಎಲ್‌ ಬ್ಯಾಂಕಿಗೆ 2.27 ಕೋಟಿ ರೂ. ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಾದ್ಯಂತ ಶಾಖೆಗಳನ್ನು ಹೊಂದಿರುವ ರತ್ನಾಕರ್‌ ಬ್ಯಾಮಕ್‌ ಲಿಮಿಟೆಡ್‌ ಅಥವಾ ಆರ್‌ಬಿಎಲ್‌ ಬ್ಯಾಂಕಿಗೆ ಭಾರತದ ಹಣಕಾಸು ನಿಯಂತ್ರಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡವನ್ನು ವಿಧಿಸಿದೆ. ರಿಕವರಿ ಏಜೆಂಟ್‌ಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬರೋಬ್ಬರಿ 2.27 ಕೋಟಿ ರೂ. ದಂಡ ವಿಧಿಸಲಾಗಿದೆ.

ಆರ್‌ಬಿಐ ಹೇಳಿಕೆ ಪ್ರಕಾರ ಆರ್‌ಬಿಎಲ್‌ ಬ್ಯಾಂಕ್‌ 2018ರ ಆಂತರಿಕ ಒಂಬುಡ್ಸ್‌ಮನ್ ಯೋಜನೆಯ ಕೆಲ ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ದಂಡವನ್ನು ವಿಧಿಸಲಾಗಿದೆ ಎಂದು ಹೇಳಿದೆ. ಇದಲ್ಲದೇ ಕೇಂದ್ರೀಯ ಬ್ಯಾಂಕ್ ತನ್ನ ವಿಭಿನ್ನ ನಿಯಮಗಳ ಉಲ್ಲಂಘನೆಗಾಗಿ ಹಲವಾರು ಸಹಕಾರಿ ಬ್ಯಾಂಕುಗಳಿಗೆ ದಂಡವನ್ನು ವಿಧಿಸಿದೆ ದಂಡ ವಿಧಿಸಲಾದ ಸಹಕಾರಿ ಬ್ಯಾಂಕ್‌ಗಳಲ್ಲಿ ಲೋಕಮಂಗಲ ಸಹಕಾರಿ ಬ್ಯಾಂಕ್, ಸೋಲಾಪುರ; ಜಿಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ ಮರ್ಯಾಡಿಟ್, ರೈಸನ್; ಸ್ಮೃತಿ ನಾಗ್ರಿಕ್ ಸಹಕಾರಿ ಬ್ಯಾಂಕ್ ಮರ್ಯಾದಿತ್, ಮಂಡ್ಸೌರ್; ರಾಯಗಡ ಸಹಕಾರಿ ಬ್ಯಾಂಕ್, ಮುಂಬೈ; ನೋಬಲ್ ಕೋ-ಆಪರೇಟಿವ್ ಬ್ಯಾಂಕ್, ನೋಯ್ಡಾ; ಮತ್ತು ಇಂಪೀರಿಯಲ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಜಲಂಧರ್‌ ಗಳು ಸೇರಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!