ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ 8 ಸಾವು, 18 ಜನರಿಗೆ ಗಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಥಮನ್‌ಪೋಕ್ಷಿಯಲ್ಲಿ ಭದ್ರತಾ ಪಡೆಗಳು ಹಾಗೂ ಶಂಕಿತ ಕುಕಿ ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ.

ಒಟ್ಟಾರೆ 72 ಗಂಟೆಗಳು ದಾಳಿ ನಡೆದಿದ್ದು, 8ಮಂದಿ ಮೃತಪಟ್ಟಿದ್ದಾರೆ. 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರು ಮಂದಿ ಸ್ಥಳೀಯ ಶಂಕಿತ ಕುಕಿ ಭಯೋತ್ಪಾದಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಗಾಯಗೊಂಡ 18 ಮಂದಿಯಲ್ಲಿ ಭದ್ರತಾ ಪಡೆಗಳ ಸಿಬ್ಬಂದಿಯೂ ಇದ್ದಾರೆ. ಗುಂಡಿನ ದಾಳಿ ನಂತರ ಬಿಷ್ಣುಪುರ ಹಾಗೂ ಕಾಂಗ್ ಭಾಯ್ ಪ್ರದೇಶದಲ್ಲಿ ಬಾಂಬ್ ಸ್ಫೋಟವೂ ಆಗಿದೆ. ಇದರಿಂದಾಗಿ ಈ ಪ್ರದೇಶಗಳಿಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

31 ಸುತ್ತು ಮದ್ದುಗುಂಡುಗಳು, 19 ಸ್ಫೋಟಕಗಳು, 3 ಐಇಡಿಗಳು ಹಾಗೂ ಇನ್ನಷ್ಟು ಆಧುನಿಕ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!