ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಈ ವಾರದ ಆರಂಭದಲ್ಲಿ ಮೂರು ಹಿಂದೂ ದೇವಾಲಯಗಳಲ್ಲಿ ಇರಿಸಲಾಗಿದ್ದ ಎಂಟು ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
ದಿನಾಜ್‌ಪುರದಲ್ಲಿ ಐದು ವಿಗ್ರಹಗಳನ್ನು ಧ್ವಂಸಗೊಳಿಸಿದ್ದರೆ, ಮೈಮೆನ್‌ಸಿಂಗ್‌ನಲ್ಲಿ ಎರಡು ದೇವಾಲಯಗಳಲ್ಲಿ ಮೂರು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಮೈಮೆನ್‌ಸಿಂಗ್‌ನ ಹಲುಘಾಟ್ ಉಪಜಿಲ್ಲೆಯಲ್ಲಿ ಗುರುವಾರ ಮತ್ತು ಶುಕ್ರವಾರದಂದು ಎರಡು ದೇವಾಲಯಗಳ ಮೂರು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ.