ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಮು ಸಂಘರ್ಷಕ್ಕೆ ಹರಿಯಾಣ ಹೊತ್ತಿ ಉರಿದಿದ್ದು, ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ನೂಹ್ ಹಾಗೂ ಗುರುಗ್ರಾಮದಲ್ಲಿ ಹಿಂಸಾಚಾರ ನಡೆದಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ, ಅಂಗಡಿ ಮುಂಗಟ್ಟುಗಳು ಸುಟ್ಟು ಭಸ್ಮವಾಗುತ್ತಿದೆ, ಪರಿಸ್ಥಿತಿ ಹೀಗಿದ್ದರೂ ಕರ್ಫ್ಯೂ ಲೆಕ್ಕಿಸದ ಜನ ರಸ್ತೆಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ.
ನಿನ್ನೆಯೂ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಾ, ರೆಸ್ಟೋರೆಂಟ್, ಅಂಗಡಿಗಳಿಗೆ 600ಜನರ ಸುಸಜ್ಜಿತ ಗುಂಪು ಬೆಂಕಿ ಹಚ್ಚಿದೆ. ಇತ್ತ ಗುರುಗ್ರಾಮದ ಮಸೀದಿ ಮೇಲೆ ದುಷ್ಕಮಿಗಳು ದಾಳಿ ಮಾಡಿದ್ದು, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮಸೀದಿಯಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈಗಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಬಜರಂಗದಳದ ಶೋಭಾಯಾತ್ರೆ ರಥವನ್ನು ತಡೆದ ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದಾಗಿ ಘರ್ಷಣೆ ಆರಂಭವಾಗಿದೆ, ಹೋಂ ಗಾರ್ಡ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದರು.