Tuesday, October 3, 2023

Latest Posts

ಯುಪಿಯಲ್ಲಿ ಪೈಶಾಚಿಕ ಕೃತ್ಯ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಸ್ಯಾನಿಟೈಸರ್ ಕುಡಿಸಿ ಕೊಂದ ದುರುಳರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಲಕ್ನೋದಲ್ಲಿ ಪೈಶಾಚಿಕ ಘಟನೆಯೊಂದು ನಡೆದಿದೆ. 11 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಪುರುಷರ ಗುಂಪೊಂದು ಲೈಂಗಿಕ ಕಿರುಕುಳ ನೀಡಿ, ಸ್ಯಾನಿಟೈಸರ್ ಕುಡಿಸಿ ಸಾಯಿಸಿದ್ದಾರೆ.

ಶಾಲೆಯಿಂದ ವಿದ್ಯಾರ್ಥಿನಿ ಮನೆಗೆ ವಾಪಾಸಾಗುವ ವೇಳೆ ಪುರುಷರ ಗುಂಪಿನಲ್ಲಿ ಒಬ್ಬ ಆಕೆಯನ್ನು ಅಡ್ಡಗಟ್ಟಿದ್ದಾನೆ. ಆರೋಪಿ ಉದೇಶ್ ರಾಥೋರ್ ಎಂಬಾತ ರಸ್ತೆಯಲ್ಲಿಯೇ ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ, ಆಗ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದು, ಇತರ ಸ್ನೇಹಿತರನ್ನು ಕರೆಸಿದ್ದಾನೆ.

ಎಲ್ಲರೂ ಸೇರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದು, ಆಕೆ ವಿರೋಧಿಸಿದ್ದಾಳೆ. ಈ ವೇಳೆ ಆಕೆಯ ಬಾಯಿ ಮುಚ್ಚಿಲು ಸ್ಯಾನಿಟೈಸರ್ ಕುಡಿಸಿದ್ದಾರೆ. ಆ ವೇಳೆಗೆ ವಿದ್ಯಾರ್ಥಿನಿಯ ಸಹೋದರ ಬಂದಿದ್ದು, ಆತನಿಗೂ ಥಳಿಸಲಾಗಿದೆ.

ನಂತರ ಎಲ್ಲರೂ ಪರಾರಿಯಾಗಿದ್ದು, ವಿದ್ಯಾರ್ಥಿನಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮನೆಯವರು ಮೃತದೇಹವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ಮಾಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಪೊಲೀಸರು ಆಶ್ವಾಸನೆ ನೀಡಿದ ನಂತರ ತೆರಳಿದ್ದಾರೆ.

ಆರೋಪಿಗಳ ಪತ್ತೆಗೆ ನಾಲ್ಕು ಪೊಲೀಸ್ ತಂಡ ರಚನೆ ಮಾಡಲಾಗಿದೆ, ಅವರನ್ನು ಶೀಘ್ರವೇ ಹುಡುಕುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!