ಮಣಿಪುರದ ಜಿರಿಬಾಮ್​​ನಲ್ಲಿ ಹಿಂಸಾಚಾರ, ನಾಲ್ಕು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಮಣಿಪುರದ ಉಗ್ರಗಾಮಿಗಳು ಬಿಷ್ಣುಪುರದ ಎರಡು ಸ್ಥಳಗಳಲ್ಲಿ ನಡೆಸಿದ ರಾಕೆಟ್‌ ದಾಳಿಯಿಂದ ಹಿರಿಯ ನಾಗರಿಕರೊಬ್ಬರು ಸಾವಿಗೀಡಾಗಿದ್ದು, ಐವರಿಗೆ ಗಾಯಗಳಾಗಿತ್ತು.

ಇದರ ಬೆನ್ನಲ್ಲೇ ಈ ಹಿಂಸಾಚಾರ ನಡೆದಿದೆ. ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ವರದಿಯಾದ ಹಿಂಸಾಚಾರದಲ್ಲಿ  ನಾಲ್ವರು ಉಗ್ರರು ಮತ್ತು ಒಬ್ಬ ನಾಗರಿಕ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಾಗರಿಕನನ್ನು ಅವನ ಮನೆಯೊಳಗೆ ಕೊಲ್ಲಲಾಯಿತು. ನಂತರ ನಡೆದ ಇದು ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಮಣಿಪುರದಲ್ಲಿ ನಿಯೋಜಿಸಲಾದ ಭದ್ರತಾ ಪಡೆಯ ಅಧಿಕಾರಿಯೊಬ್ಬರು ಸಾವುನೋವುಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಬೆಳಿಗ್ಗೆ ಉಗ್ರರು ಗ್ರಾಮಕ್ಕೆ ನುಗ್ಗಿ ಒಬ್ಬ ವ್ಯಕ್ತಿಯನ್ನು ಕೊಂದ ನಂತರ ಗುಂಡಿನ ಚಕಮಕಿ ಪ್ರಾರಂಭವಾಯಿತು. ಈ ಹತ್ಯೆಯು ಜನಾಂಗೀಯ ಘರ್ಷಣೆಯ ಭಾಗವಾಗಿತ್ತು. ಗುಂಡಿನ ಚಕಮಕಿ ನಡೆಯುತ್ತಿದೆ. ಸಾವಿಗೀಡಾದವರು ಕುಕಿ ಮತ್ತು ಮೈತಿ ಎರಡೂ ಸಮುದಾಯದವರು ಎಂಬ ವರದಿಗಳು ನಮ್ಮ ಬಳಿ ಇವೆ ಎಂದು ಅಧಿಕಾರಿ ಹೇಳಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ನಡೆಯುತ್ತಿದ್ದರೆ, ಇದೀಗ ನಡೆದ ಹಿಂಸಾಚಾರದಿಂದ ಕಳೆದ 5 ದಿನಗಳಲ್ಲಿ ಪರಿಸ್ಥಿತಿಯು ತೀವ್ರ ಉದ್ವಿಗ್ನವಾಗಿದೆ. ಶುಕ್ರವಾರ ರಾತ್ರಿ, ಬಿಷ್ಣುಪುರದಲ್ಲಿ ರಾಕೆಟ್ ದಾಳಿಯ ಕೆಲವೇ ಗಂಟೆಗಳ ನಂತರ, ಇಂಫಾಲ್‌ನಲ್ಲಿ ಗುಂಪುಗಳು 2 ಮಣಿಪುರ ರೈಫಲ್ಸ್ ಮತ್ತು 7 ಮಣಿಪುರ ರೈಫಲ್ಸ್‌ನ ಪ್ರಧಾನ ಕಚೇರಿಯಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲು ಪ್ರಯತ್ನಿಸಿದವು. ಭದ್ರತಾ ಪಡೆಗಳು ಅವರ ಪ್ರಯತ್ನವನ್ನು ವಿಫಲಗೊಳಿಸಿದವು.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!