ಪಶ್ಚಿಮ ಬಂಗಾಳ ರಕ್ತಸಿಕ್ತ: ಪಂಚಾಯತ್ ಚುನಾವಣೆಯ ಘರ್ಷಣೆಯಲ್ಲಿ ಸಾವಿನ ಸಂಖ್ಯೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಶ್ಚಿಮ ಬಂಗಾಳದಲ್ಲಿ ಶನಿವಾರದಂದು ರಾಜ್ಯದ ಹಲವೆಡೆ ಬಂದೂಕು ಸ್ಫೋಟ, ಬಾಂಬ್ ಸ್ಫೋಟಗಳಿಂದ ತತ್ತರಿಸಿದೆ. ಈ ಹಿಂಸಾತ್ಮಕ ಘಟನೆಗಳಲ್ಲಿ ಇದುವರೆಗೂ 18 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹತ್ತು ಟಿಎಂಸಿ ಕಾರ್ಯಕರ್ತರು ಬಿಜೆಪಿ, ಸಿಪಿಐ(ಎಂ), ಕಾಂಗ್ರೆಸ್, ISF ಪಕ್ಷಗಳಿಗೆ ಸೇರಿದವರೂ ಇದ್ದಾರೆ. ಹಲವೆಡೆ ಪ್ರತಿಭಟನಾಕಾರರು ಮತಗಟ್ಟೆಗಳನ್ನು ಧ್ವಂಸಗೊಳಿಸಿದ್ದಾರೆ. ಆದಾಗ್ಯೂ, ಹಿಂಸಾಚಾರದ ನಡುವೆ, ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ 66.28 ರಷ್ಟು ಮತದಾನವಾಗಿದೆ.

ಶನಿವಾರ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ನಡೆದ ಘರ್ಷಣೆಯಲ್ಲಿ ಒಟ್ಟು 18 ಮಂದಿ ಸಾವನ್ನಪ್ಪಿದ್ದರು. ಇವರಲ್ಲಿ ಆಡಳಿತ ಪಕ್ಷ ಟಿಎಂಸಿಯ 10 ಕಾರ್ಯಕರ್ತರು ಇದ್ದಾರೆ. ಬಿಜೆಪಿಯ ಮೂವರು, ಕಾಂಗ್ರೆಸ್‌ನ ಮೂವರು ಮತ್ತು ಸಿಪಿಐಎಂನ ಇಬ್ಬರು ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಮುರ್ಷಿದಾಬಾದ್, ಕೂಚ್ ಬೆಹಾರ್, ಪೂರ್ವ ಬುದ್ವಾನ್ ಮತ್ತು ಮಾಲ್ಡಾ ಪ್ರದೇಶಗಳಲ್ಲಿ ಈ ಹಿಂಸಾಚಾರದ ಘಟನೆಗಳು ನಡೆದಿವೆ. ಕೂಚ್ ಬಿಹಾರ ಜಿಲ್ಲೆಯ ದಿನ್ಹತಾದಲ್ಲಿ ದುಷ್ಕರ್ಮಿಗಳು ಮತಯಂತ್ರಗಳನ್ನು ನಾಶಪಡಿಸಿ ಬೆಂಕಿ ಹಚ್ಚಿದ್ದಾರೆ. ಮತದಾನ ಕೇಂದ್ರದಿಂದ ಯುವಕನೊಬ್ಬ ಮತಪೆಟ್ಟಿಗೆ ಎತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂಸಾಚಾರದ ಘಟನೆಗಳ ಬಗ್ಗೆ ರಾಜ್ಯಪಾಲ ಸಿವಿ ಆನಂದ್ ಬೋಸ್ ಕಳವಳ ವ್ಯಕ್ತಪಡಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಉದ್ವಿಗ್ನ ಪ್ರದೇಶಗಳಿಗೆ ರಾಜ್ಯಪಾಲ ಆನಂದ ಬೋಸ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಬಿಜೆಪಿ ಒತ್ತಾಯಿಸಿದೆ. ಮಮತಾ ಬ್ಯಾನರ್ಜಿ ಸರ್ಕಾರದ ಅವಧಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲಿಲ್ಲ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಟೀಕಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!