ಹೊಸದಿಗಂತ ವರದಿ ವಿರಾಜಪೇಟೆ:
ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.21ರಂದು ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಲಿದ್ದು ಸಮ್ಮೇಳನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಆಸಕ್ತ ಸಾರ್ವಜನಿಕರು, ಕನ್ನಡ ಅಭಿಮಾನಿಗಳು, ಸಾಹಿತ್ಯಾಸಕ್ತರು ಜ.5 ಒಳಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಕೋರಲಾಗಿದೆ.
ಕನ್ನಡ ಹಾಡುಗಳು, ಕನ್ನಡ ಭಾವಗೀತೆಗಳು, ಕನ್ನಡ ಜಾನಪದ ಹಾಡುಗಳು ಹಾಗೂ ಕನ್ನಡ ಹಾಡಿಗೆ ನೃತ್ಯ ಇತ್ಯಾದಿಗಳನ್ನು ಪ್ರಸ್ತುತಪಡಿಸಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದ್ದು ವಿದ್ಯಾರ್ಥಿಗಳ ವಿಭಾಗದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಶಾಲೆ ಮತ್ತು ತರಗತಿಯನ್ನು ನಮೂದಿಸತಕ್ಕದ್ದು.
ಕಾರ್ಯಕ್ರಮ ನೀಡುವ ಚಿತ್ರೀಕರಣವನ್ನು 9448544321 ಅಥವಾ 9482194304 ಈ ಸಂಖ್ಯೆಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಆಯ್ಕೆಯಾದ ಕಾರ್ಯಕ್ರಮಗಳನ್ನು ಜ.10 ರಂದು ತಿಳಿಸಲಾಗುವುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ಹಾಗೂ ಗೌರವ ಕಾರ್ಯದರ್ಶಿ ಟೋಮಿ ಥೋಮಸ್ (ನಾ ಕನ್ನಡಿಗ) ತಿಳಿಸಿದ್ದಾರೆ.
ಕವಿಗೋಷ್ಠಿ: ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕವಿಗೋಷ್ಠಿಗೆ ವೀರಾಜಪೇಟೆ ತಾಲೂಕಿನ ಆಸಕ್ತ ಯುವ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ.
ಕವನಗಳು 16 ರಿಂದ 20 ಸಾಲುಗಳ ಮಿತಿಯಲ್ಲಿ ಇರಬೇಕು. ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳ ವಿಭಾಗ ಮತ್ತು ಸಾರ್ವಜನಿಕರ ವಿಭಾಗದಿಂದಲೂ ಕವನಗಳನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾದ ಕವನಗಳನ್ನು ಮಾತ್ರ ಕವಿಗೋಷ್ಠಿಯಲ್ಲಿ ವಾಚಿಸಲು ಅವಕಾಶ ನೀಡಲಾಗುವುದು.
ಕವನಗಳನ್ನು 9008613729 ಮತ್ತು 9008383051 ವಾಟ್ಸಾಪ್ ನಂಬರ್’ಗೆ ಜ.4ರೊಳಗೆ ಕಳುಹಿಸಬಹುದು ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಟೋಮಿ ಥೋಮಸ್ (ನಾ ಕನ್ನಡಿಗ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.