ವೈರಲ್‌ ಆಯ್ತು ಶಶಿ ತರೂರ್‌ ಫನ್ನಿ ಪೋಸ್‌: ಹಾಡುಗಳು, ಕಮೆಂಟ್‌ಗಳ ಮೂಲಕ ಕಾಲೆಳೆದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ರಾಜಕಾರಣಿಗಳು, ಸೆಲೆಬ್ರಿಟಿಗಳ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರುತ್ತವೆ. ಅವರು ಏನೇ ಮಾಡಿದ್ರೂ ಸುದ್ದಿಯಾಗುವುದು ಕಾಮನ್‌. ಅದರಲ್ಲಿಯೂ ರಾಜಕಾರಣಿಗಳ ಭಾವ-ಭಂಗಿ- ಮಾತುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಗಳಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಆ ಸಾಲಿಗೆ ಕಾಂಗ್ರೆಸ್ ಸಂಸದ ಶಶಿತರೂರ್‌‌ ಹಾಗೂ ಎನ್‌ಸಿಪಿ ಸಂಸದ ಸುಪ್ರಿಯಾ ಸುಲೆ ಸೇರ್ಪಡೆಯಾಗಿದ್ದು, ಅವರ ಮಾತುಕತೆ ವಿಡಿಯೋವೊಂದು ಜಾಲತಾಣಗಳಲ್ಲಿ ಸಕ್ಕತ್‌ ವೈರಲ್‌ ಆಗುತ್ತಿದೆ. ಅವರಿಬ್ಬರ  ನಡವಳಿಕೆಗೆ ನೆಟ್ಟಿಗರು ಫನ್ನಿ ಕಮೆಂಟ್‌ಗಳ ಕಚಗುಳಿ ಇಡುತ್ತಿದ್ದಾರೆ. ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡು ಸೆಟ್‌ ಮಾಡಿ ಮೀಮ್ಸ್‌ ಹರಿಬಿಡುತ್ತಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಕುರಿತ ಚರ್ಚೆಯಲ್ಲಿ ಶಶಿತರೂರ್ ಅವರು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದರು. ಇವರ ಮಾತಿನ ಬಳಿಕ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮಾತನಾಡುವ ವೇಳೆ ಸಂಸದೆ ಸುಪ್ರಿಯಾ ಸುಲೆ, ತನ್ನ ಹಿಂದೆ ಕುಳಿತ ಶಶಿತರೂರ್ ಅವರೊಂದಿಗೆ ಮಾತನಾಡುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸುಪ್ರಿಯಾ ಅವರ ಮಾತನ್ನು ಸಶಿ ತರೂರ್‌ ತುಂಬಾ ಮನಸಿಟ್ಟು ನಗುಮೊಗದಿಂದ ಆಲಿಸುತ್ತಿರುವ ರೀತಿಯಲ್ಲಿ ಬೆಂಚಿನ ಮೇಲೆ ಕೈಯೂರಿ, ತಮ್ಮ ಗಲ್ಲವನ್ನು ಕೈ ಮೇಲಿಟ್ಟ ಭಂಗಿಯಲ್ಲಿ ಅತ್ಯಂತ ನಾಜೂಕಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭವನ್ನು ಜೂಮ್‌ ಮಾಡಿ ತಮಾಷೆಯ ಕಮೆಂಟ್‌ಗಳ ಮೂಲಕ ಹಾಗೂ ಹಾಡುಗಳನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!