ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಅದ್ದೂರಿ ಮದುವೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು ಸಾಮಾನ್ಯವಾಗಿದೆ. ಕೆಲವರು ಅದಕ್ಕಾಗಿ ಸಾಲವನ್ನೂ ತೆಗೆದುಕೊಳ್ಳುತ್ತಾರೆ. ಆದರೆ ಒಂದು ಜೋಡಿ ಮಾತ್ರ ವಿಭಿನ್ನ ನಿರ್ಧಾರ ತೆಗೆದುಕೊಂಡು, ಮದುವೆ ವೆಚ್ಚಕ್ಕಾಗಿ ಕೂಡಿಟ್ಟ ಹಣದಲ್ಲಿ ಮನೆ ಖರೀದಿಸಿ, ಅದೇ ಹೊಸ ಮನೆಯಲ್ಲಿ ಸರಳವಾಗಿ ವಿವಾಹವಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಈ ವಿಶಿಷ್ಟ ಮದುವೆಯ ಕ್ಷಣಗಳನ್ನು @ArnazHathiram ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ನವ ದಂಪತಿ ತಮ್ಮ ಹೊಸ ಮನೆಯಲ್ಲೇ ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿರುವ ದೃಶ್ಯ ಕಾಣುತ್ತದೆ.
ಇದನ್ನೂ ಓದಿ:
ಅತಿಥಿಗಳಿಗಾಗಿ ಅನಗತ್ಯ ಖರ್ಚು ಮಾಡದೇ, ಭವಿಷ್ಯದ ಭದ್ರತೆಯನ್ನು ಗಮನದಲ್ಲಿಟ್ಟು ತೆಗೆದುಕೊಂಡ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮದುವೆಗಾಗಿ ಸಾಲ ಮಾಡಿಕೊಳ್ಳುವುದಕ್ಕಿಂತ, ಜೀವನಪೂರ್ತಿ ಉಪಯೋಗವಾಗುವ ಆಸ್ತಿ ಖರೀದಿಸುವುದು ಉತ್ತಮ ಎನ್ನುವ ಸಂದೇಶವನ್ನು ಈ ಜೋಡಿ ನೀಡಿದೆ ಎಂದು ಹಲವರು ಕಾಮೆಂಟ್‌ಗಳಲ್ಲಿ ಹೇಳಿದ್ದಾರೆ.



