ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಕ್ಸ್ ನಲ್ಲಿ ಹಾಕಿದ ಪೋಸ್ಟ್ ಒಂದು ಇದೀಗ ದೇಶಾದ್ಯಂತ ಡೇಟಾ ಸುರಕ್ಷತೆ ಕುರಿತ ಗಂಭೀರ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ, ರಸ್ತೆ ಬದಿಯ ಆಹಾರವನ್ನು ತಿನ್ನಲು ಬಳಸಿರುವ ಪ್ಲೇಟ್ ತಯಾರಾಗಿದ್ದು ಬ್ಯಾಂಕ್ ನ ದಾಖಲೆ ಎನ್ನಲಾಗಿದ್ದು, ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ಈ ಚಿತ್ರದಲ್ಲಿ, ಬೋಂಡಾ ಬಜ್ಜಿ ತಿನ್ನುವ ಕಾಗದದ ಪ್ಲೇಟ್ ಮೇಲೆ ವ್ಯಕ್ತಿಯ ಹೆಸರು, ಸ್ಥಳ, ಪಾವತಿ ಸಂಬಂಧಿತ ಮಾಹಿತಿಯಂತೆ ಕಾಣುವ ವಿವರಗಳು ಸ್ಪಷ್ಟವಾಗಿ ಮುದ್ರಿತವಾಗಿವೆ. ಕೆಲವು ಅಂಶಗಳನ್ನು ಗೀಚಿದಂತೆ ಕಂಡರೂ, ಹಲವು ಮಾಹಿತಿ ಓದಲು ಸಾಧ್ಯವಾಗಿರುವುದು ಡೇಟಾ ಲೀಕ್ ಭೀತಿಯನ್ನು ಹೆಚ್ಚಿಸಿದೆ.
ಇದನ್ನೂ ಓದಿ:
ಈ ಚಿತ್ರವು ರೈಲು ನಿಲ್ದಾಣ ಅಥವಾ ಮೆಟ್ರೋ ಜನಸಂದಣಿ ಪ್ರದೇಶದಲ್ಲಿ ತೆಗೆಯಲಾಗಿದೆ ಎನ್ನಲಾಗಿದ್ದು, ಸಾರ್ವಜನಿಕ ಸ್ಥಳದಲ್ಲೇ ಖಾಸಗಿ ಮಾಹಿತಿಯ ದುರುಪಯೋಗವಾಗಿರುವಂತೆ ತೋರುತ್ತಿದೆ.
ಈ ಪೋಸ್ಟ್ ವೈರಲ್ ಆದ ಬಳಿಕ, ಸಾಮಾಜಿಕ ಜಾಲತಾಣ ಬಳಕೆದಾರರು ಕಿಡಿಕಾರಿದ್ದಾರೆ. “ಬ್ಯಾಂಕ್ ದಾಖಲೆಗಳು ಹೇಗೆ ರಸ್ತೆ ವ್ಯಾಪಾರಿಗಳ ಕೈಗೆ ತಲುಪುತ್ತವೆ?” ಎಂಬ ಪ್ರಶ್ನೆಗಳನ್ನು ಹಲವರು ಎತ್ತಿದ್ದಾರೆ. ಕೆಲವರು ವ್ಯಂಗ್ಯವಾಡಿದರೆ, ಇನ್ನು ಕೆಲವರು ಗಂಭೀರವಾಗಿ ಡೇಟಾ ಸಂರಕ್ಷಣೆಯ ಕೊರತೆಯತ್ತ ಬೆರಳು ತೋರಿದ್ದಾರೆ.



