June 24, 2026
Wednesday, June 24, 2026
spot_img

Viral | ಗ್ರೌಂಡ್ ಗೆ ಎಂಟ್ರಿ ಕೊಡೋದು ಹಿಂಗೇ ನೋಡಿ…..!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ತಮ್ಮ ವಿಭಿನ್ನ ಎಂಟ್ರಿಯಿಂದ ಅಭಿಮಾನಿಗಳ ಗಮನ ಸೆಳೆದರು. ಸಾಮಾನ್ಯವಾಗಿ ಆಟಗಾರರು ಪ್ರವೇಶ ದ್ವಾರದಿಂದ ಮೈದಾನಕ್ಕಿಳಿಯುವ ಪದ್ಧತಿ ಇದ್ದರೂ, ಪಂತ್ ಜಾಹೀರಾತು ಬೋರ್ಡ್‌ಗಳನ್ನು ಜಂಪ್ ಮಾಡಿ ಮೈದಾನದೊಳಗೆ ಪ್ರವೇಶಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಂದ್ಯದ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್, ಐದನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಎಸೆದ ಬೌನ್ಸರ್‌ನ್ನು ಪುಲ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ಗೆ ತಗುಲದೇ ನೇರವಾಗಿ ಅವರ ಮೊಣಕೈ ಭಾಗಕ್ಕೆ ಬಲವಾಗಿ ಅಪ್ಪಳಿಸಿತು. ತಕ್ಷಣವೇ ನೋವಿನಿಂದ ಬಳಲಿದ ಪಂತ್‌ಗೆ ತಂಡದ ಫಿಸಿಯೋ ಚಿಕಿತ್ಸೆ ನೀಡಿದರು. ನೋವು ತಗ್ಗದ ಹಿನ್ನೆಲೆ ಅವರು ಮೈದಾನದಿಂದ ಹೊರನಡೆದರು.

ಇದನ್ನೂ ಓದಿ:

ಆದರೂ ತಂಡದ ಅಗತ್ಯದ ಸಮಯದಲ್ಲಿ 16ನೇ ಓವರ್‌ನಲ್ಲಿ ಮತ್ತೆ ಬ್ಯಾಟಿಂಗ್‌ಗೆ ಮರಳಿದ ಪಂತ್, ಕೇವಲ 1 ರನ್ ಗಳಿಸಿ ಔಟಾದರು. ನಾಯಕನ ಹೋರಾಟ ಮನೋಭಾವ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !