April 16, 2026
Thursday, April 16, 2026
spot_img

CINE | ‘ಭೂತ್ ಬಂಗ್ಲ’ಗೆ ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್: ಬಿಡುಗಡೆಗೂ ಮೊದಲೇ ‘ಶುಭಶಕುನ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಮತ್ತೊಮ್ಮೆ ಹಾರರ್–ಕಾಮಿಡಿ ಹವಾ ಸೃಷ್ಟಿಸಲು ಸಜ್ಜಾಗಿರುವ ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಚಿತ್ರ ಬಿಡುಗಡೆಗೂ ಮುನ್ನವೇ ಉತ್ತಮ ಚರ್ಚೆ ಹುಟ್ಟುಹಾಕಿದೆ. ನಿರ್ದೇಶಕ ಪ್ರಿಯದರ್ಶನ್ ಜೊತೆಗಿನ ಈ ಬಹುನಿರೀಕ್ಷಿತ ಸಿನಿಮಾ ಏಪ್ರಿಲ್ 17ರಂದು ತೆರೆಕಾಣಲಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಸರಣಿಗಳಾದ ಪಿವಿಆರ್ ಐನಾಕ್ಸ್ ಮತ್ತು ಸಿನಿಪೊಲಿಸ್‌ನಲ್ಲಿ ಈಗಾಗಲೇ 20 ಸಾವಿರ ಟಿಕೆಟ್‌ಗಳು ಮಾರಾಟವಾಗಿದ್ದು, ಪ್ರಿವ್ಯೂ ಶೋ 10,500 ಹಾಗೂ ಮೊದಲ ದಿನದ ಶೋಗೆ 9,000 ಟಿಕೆಟ್ ಮಾರಾಟ ಆಗಿರುವುದು ಚಿತ್ರಕ್ಕೆ ಪಾಸಿಟಿವ್ ಸಿಗ್ನಲ್ ನೀಡಿದೆ. ಬುಕ್ಕಿಂಗ್ ವೇಗ ಇದೇ ರೀತಿಯಲ್ಲಿ ಮುಂದುವರಿದರೆ ಮೊದಲ ದಿನ ಉತ್ತಮ ಓಪನಿಂಗ್ ಕಲೆಕ್ಷನ್ ಸಾಧ್ಯವೆಂದು ಟ್ರೇಡ್ ವಲಯ ಅಂದಾಜಿಸಿದೆ.

ಇದನ್ನೂ ಓದಿ:

ಟ್ರೇಡ್ ವರದಿಗಳ ಪ್ರಕಾರ, ‘ಭೂತ್ ಬಂಗ್ಲ’ ಚಿತ್ರವು ಪ್ರಿವ್ಯೂ ಶೋಗಳೊಂದಿಗೆ ಸೇರಿ ಮೊದಲ ದಿನ ಸುಮಾರು ₹15 ಕೋಟಿ ವರೆಗೆ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ ಹಿಟ್ ಚಿತ್ರಗಳ ಸರಣಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಸಿನಿಮಾದ ಮೇಲೂ ನಿರೀಕ್ಷೆ ಹೆಚ್ಚಾಗಿದೆ.

ಚಿತ್ರದ ನಿರ್ಮಾಣ ವೆಚ್ಚ ನಿಯಂತ್ರಿತ ಮಟ್ಟದಲ್ಲಿದ್ದು, ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳಿಂದಲೇ ಉತ್ತಮ ಆದಾಯ ಬಂದಿದೆ ಎನ್ನಲಾಗುತ್ತಿದೆ. ಮೊದಲ ದಿನ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕರೆ, ಅಕ್ಷಯ್ ಕುಮಾರ್ ಖಾತೆಗೆ ಮತ್ತೊಂದು ಯಶಸ್ಸು ಸೇರ್ಪಡೆಯಾಗುವ ಸಾಧ್ಯತೆ ಗಟ್ಟಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !