ಮೀನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು ಅಂತ ಎಲ್ಲರೂ ಹೇಳೋದನ್ನು ಕೇಳಿರ್ತೀವಿ. ವೈದ್ಯರು ಕೂಡ “ಮೀನಿನಲ್ಲಿ ಪ್ರೋಟೀನ್ ಹೆಚ್ಚು, ತಿನ್ನೋದು ಒಳ್ಳೆಯದು” ಅಂತ ಸಲಹೆ ಕೊಡ್ತಾರೆ. ಆದರೆ ಇತ್ತೀಚೆಗೆ ವೈರಲ್ ಆಗಿರೋ ಒಂದು ವಿಡಿಯೋ ನೋಡಿದ್ರೆ ಯಾರೊಬ್ಬರೂ ಮೀನು ತಿನ್ನಲ್ಲ ಪಕ್ಕ! ಈ ವಿಡಿಯೋ ನೋಡಿ ತುಂಬಾ ಜನ “ನಮ್ಮ ಆರೋಗ್ಯವೇ ಅಪಾಯದಲ್ಲಿದೆನಾ?” ಅಂತ ಆತಂಕ ಪಡ್ತಾ ಇದ್ದಾರೆ.
ವೈರಲ್ ವಿಡಿಯೋ – ಮೀನಿಗೆ ಹಾರ್ಮೋನ್ ಇಂಜೆಕ್ಷನ್?!
ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಒಂದು ವಿಡಿಯೋದಲ್ಲಿ, ಕೆಲವರು ಮೀನಿಗೆ ಹಾರ್ಮೋನ್ ಇಂಜೆಕ್ಷನ್ ಕೊಡುವ ದೃಶ್ಯ ಸೆರೆಯಾಗಿದೆ. 17α-ಮಿಥೈಲ್ಟೆಸ್ಟೊಸ್ಟೆರಾನ್ ಎಂಬ ಸ್ಟಿಯರಾಯ್ಡ್ ಹಾರ್ಮೋನ್‌ನನ್ನು ಮೀನಿಗೆ ಚುಚ್ಚುತ್ತಿದ್ದಾರೆ. ಇದರಿಂದ ಮೀನು ಅಸಹಜವಾಗಿ ವೇಗವಾಗಿ ಬೆಳೆದು ತೂಕ ಹೆಚ್ಚಾಗುತ್ತಿದೆ.
ಇದು ಕೇವಲ ಲಾಭಕ್ಕಷ್ಟೇ – ಆರೋಗ್ಯದ ಮೇಲೆ ಭಾರೀ ಅಪಾಯ
ಈ ಪದ್ಧತಿ ಸಂಪೂರ್ಣ ಕಾನೂನುಬಾಹಿರ. ಆದರೆ ಲಾಭಕ್ಕಾಗಿ ಕೆಲವರು ಮೀನಿಗೆ ಈ ರೀತಿಯ ಸ್ಟಿಯರಾಯ್ಡ್ ನೀಡುತ್ತಿದ್ದಾರೆ. ಈ “ಬಾಹ್ಯ ಹಾರ್ಮೋನ್” ಮೀನಿನ ದೇಹದಲ್ಲಿ ಉಳಿಯುತ್ತದೆ. ನಾವು ಅದು ತಿಂದಾಗ, ಆ ಹಾರ್ಮೋನುಗಳು ನೇರವಾಗಿ ನಮ್ಮ ದೇಹದೊಳಗೆ ಸೇರುತ್ತವೆ.
ತಜ್ಞರ ಎಚ್ಚರಿಕೆ ಪ್ರಕಾರ, ಈ ಹಾರ್ಮೋನ್ ಮಿಶ್ರಿತ ಮೀನು ತಿಂದರೆ ದೀರ್ಘಕಾಲಿಕವಾಗಿ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು:
ಹಾರ್ಮೋನು ಅಸಮತೋಲನ
ಮಕ್ಕಳಲ್ಲಿ ಬೇಗನೆ ಪ್ರೌಢಾವಸ್ಥೆ ಬೆಳವಣಿಗೆ
ಮಹಿಳೆಯರ ಸಂತಾನೋತ್ಪತ್ತಿ ಸಮಸ್ಯೆ
ಅಂತಃಸ್ರಾವಕ ಗ್ರಂಥಿಗಳ ತೊಂದರೆ
ಕೆಲವು ಕ್ಯಾನ್ಸರ್‌ಗಳ ಅಪಾಯ
ಪರಿಸರಕ್ಕೂ ಅಪಾಯವಿದೆ
ಈಮೀನು ಸಾಕಣೆಯಲ್ಲಿ ಬಳಸಿದ ರಾಸಾಯನಿಕ ಹಾರ್ಮೋನುಗಳು ನೀರಿಗೆ ಸೇರುತ್ತವೆ. ನಂತರ ಆ ನೀರು ನದಿಗಳಿಗೆ ಸೇರುವ ಮೂಲಕ ಮೀನು, ಜಲಚರ ಪ್ರಾಣಿಗಳು ಮತ್ತು ಸಸ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಸಂಪೂರ್ಣ ಜೈವಿಕ ಚಕ್ರವನ್ನೇ ಅಸ್ತವ್ಯಸ್ತ ಮಾಡಬಹುದು.
ಈ ರೀತಿಯ ಹಾರ್ಮೋನ್ ಇಂಜೆಕ್ಷನ್ ಬಳಕೆ ಸರಕಾರದಿಂದ ನಿಷೇಧಿತವಾಗಿದೆ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ಆರೋಗ್ಯ ತಜ್ಞರು ಒತ್ತಾಯಿಸುತ್ತಿದ್ದಾರೆ.
View this post on Instagram