ಮಹಾಕುಂಭ ಮೇಳದ ವೈರಲ್ ಹುಡುಗಿಗೆ ಬಂತು ಬಾಲಿವುಡ್​ನಿಂದ ಆಫರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ರಾತ್ರಿ ಕಳೆದು ಬೆಳಗಾಗುವದರೊಳಗೆ ಅದೆಷ್ಟು ಜನರು ಸ್ಟಾರ್ ಆಗಿಬಿಡುತ್ತಾರೆ. ಟೀ ಮಾರುವ ಹುಡುಗ ಮಾಡೆಲ್ ಆಗಿದ್ದು, ಭಿಕ್ಷುಕ ಮಾಡೆಲ್ ಆಗಿದ್ದು, ಮೀನು ಮಾರುವ ಹುಡುಗಿ ಫ್ಯಾಷನ್ ಶೋ ಮಾಡಿದ್ದು, ಒಂದು ಕಣ್ಸನ್ನೆಯಿಂದ ಪ್ರಿಯಾ ವಾರಿಯಸ್ ಸ್ಟಾರ್ ಆಗಿದ್ದು ಎಲ್ಲವೂ ಸಾಧ್ಯವಾಗಿದ್ದು ಇದೇ ಸೋಷಿಯಲ್ ಮೀಡಿಯಾದಿಂದ. ಇದೀಗ ಮಹಾಕುಂಭದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿಗೆ ಇದೇ ಸಾಮಾಜಿಕ ಜಾಲತಾಣದಿಂದ ಅದೃಷ್ಟ ಖುಲಾಯಿಸಿದೆ. ವೈರಲ್ ಹುಡುಗಿಗೆ ಬಾಲಿವುಡ್​ನಿಂದ ಆಫರ್ ಬಂದಿದೆ.

ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿಯೊಬ್ಬಾಕೆಯ ಚಿತ್ರವೊಂದು ಸಖತ್ ವೈರಲ್ ಆಗಿತ್ತು. ಆಕೆಯ ಸೌಂದರ್ಯಕ್ಕೆ ವಿಶೇಷವಾಗಿ ಆಕೆಯ ಸೆಳೆಯುವ ಕಣ್ಣುಗಳಿಗೆ ಜನ ಮಾರು ಹೋಗಿದ್ದರು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಸಾಮಾಜಿಕ ಜಾಲತಾಣದಲ್ಲಿ ಆ ಚೆಲುವೆ ಫೇಮಸ್ ಆಗಿದ್ದರು. ಇದೀಗ ಯುವತಿಗೆ ಬಾಲಿವುಡ್​ನಿಂದ ಆಫರ್ ಬಂದಿದೆ.

ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರ, ಆ ವೈರಲ್ ಯುವತಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ‘ಡೈರಿ ಆಫ್ ಮಣಿಪುರ್’ ಹೆಸರಿನ ಸಿನಿಮಾ ಅನ್ನು ಸನೋಜ್ ಮಿಶ್ರ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ವೈರಲ್ ಹುಡುಗಿಯೇ ನಾಯಕಿ. ಇದಕ್ಕಾಗಿ ಮೊನಾಲಿಸಾ ಲುಕ್ ಟೆಸ್ಟ್ ಸಹ ನಡೆಸಲಾಗಿದೆ.

ವೈರಲ್ ಯುವತಿಗೆ ಮೇಕೋವರ್ ಮಾಡಲಾಗಿದ್ದು, ಮೇಕೊವರ್ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಮಾತ್ರವೇ ಅಲ್ಲದೆ ಮಹಾಕುಂಭದ ಮೊನಾಲಿಸಾಗೆ ನಟನಾ ತರಬೇತಿಯನ್ನು ಸಹ ಕೊಡಿಸಲಾಗುತ್ತಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!