ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ಮತ್ತು ಹಿರಿಯರ ನಡುವಿನ ಬಾಂಧವ್ಯವನ್ನು ಹೇಳುವ ಒಂದು ಸುಂದರ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಜನಮನ ಸೆಳೆಯುತ್ತಿದೆ. ನಾಗ್ಪುರದ ಕುಟುಂಬವೊಂದರಲ್ಲಿ ಮೊಮ್ಮಗಳು ತನ್ನ 77 ವರ್ಷದ ಅಜ್ಜಿಗೆ ವಿಡಿಯೋ ಗೇಮ್ ಆಡೋದನ್ನು ಕಲಿಸುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.
ಈ ಫೋಟೋವನ್ನು ‘ಮೈಂಡ್ ಎಕ್ಸ್‌ವೇಟರ್’ ಎಂಬ ಎಕ್ಸ್ ಖಾತೆಯಲ್ಲಿ ನಾಗ್ಪುರದ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ತಮ್ಮ ಮಗಳು ತಾಳ್ಮೆಯಿಂದ ತನ್ನ ಅಜ್ಜಿಗೆ ಟಿವಿ ಪರದೆಯ ಮೇಲೆ ಗೇಮ್ ಆಡೋದನ್ನು ವಿವರಿಸುತ್ತಿರುವುದು ಈ ಚಿತ್ರದಲ್ಲಿ ಕಾಣಿಸುತ್ತದೆ. ಅಜ್ಜಿಯ ಮುಖದಲ್ಲಿನ ಕುತೂಹಲ ಮತ್ತು ಗಮನ ಎಲ್ಲರ ಮನ ಗೆದ್ದಿದೆ.
ಪೋಸ್ಟ್‌ಗೆ “ಈ ಪ್ರೀತಿ ಮತ್ತು ಕಾಳಜಿ ಮೌನವಾಗಿ ಮಾತನಾಡುತ್ತದೆ. ಈ ಕ್ಷಣ ಸೆರೆಹಿಡಿದಾಗ ನನ್ನ ಮನಸ್ಸು ತುಂಬಿ ಬಂತು” ಎಂಬ ಭಾವನಾತ್ಮಕ ಶೀರ್ಷಿಕೆ ನೀಡಲಾಗಿದೆ. ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆ ಪಡೆದ ಈ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಜ್ಜಿ–ಮೊಮ್ಮಗಳ ನಡುವಿನ ಪ್ರೀತಿಯ ಬಂಧಕ್ಕೆ ಇದು ಸುಂದರ ಸಾಕ್ಷಿಯೆಂದು ಅನೇಕರು ಕಾಮೆಂಟ್ ಮಾಡಿದ್ದಾರೆ.



