September 27, 2026
Sunday, September 27, 2026
spot_img

ಎಸ್‌ಎಂವಿಟಿ–ಎಲ್‌ಟಿಟಿ ವಿಶೇಷ ರೈಲು: ಮಾರ್ಚ್ 1ರಂದು ಒನ್‌ವೇ ಸೇವೆ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟು ನೈಋತ್ಯ ರೈಲ್ವೆ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ವರೆಗೆ ಮಾರ್ಚ್ 1ರಿಂದ ಏಕಮುಖ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06541 ಭಾನುವಾರ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, ಮರುದಿನ ರಾತ್ರಿ 11.30ಕ್ಕೆ ಮುಂಬೈ ತಲುಪಲಿದೆ. ಮಾರ್ಗಮಧ್ಯೆ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ ಮತ್ತು ಕಲ್ಯಾಣ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ಇದನ್ನೂ ಓದಿ:

ಒಟ್ಟು 19 ಬೋಗಿಗಳಿರುವ ಈ ರೈಲಿನಲ್ಲಿ 15 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳು ಹಾಗೂ 2 ಎಸ್‌ಎಲ್‌ಆರ್ ಬೋಗಿಗಳಿವೆ. 2 ಎಸಿ ಕೋಚ್‌ಗಳು ಲಾಕ್ ಮಾಡಲ್ಪಟ್ಟಿರುವುದರಿಂದ ಪ್ರಯಾಣಿಕರಿಗೆ ಲಭ್ಯವಿರುವುದಿಲ್ಲ.

ಈ ವಿಶೇಷ ರೈಲು ಸಂಪೂರ್ಣ ಕಾಯ್ದಿರಿಸದ ಸೇವೆಯಾಗಿದ್ದು, ಪ್ರಯಾಣಿಕರು ಮೊಬೈಲ್ ಆಪ್ ಅಥವಾ ನಿಲ್ದಾಣ ಕೌಂಟರ್‌ಗಳ ಮೂಲಕ ಟಿಕೆಟ್ ಪಡೆದು ಪ್ರಯಾಣಿಸಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

Must Read