ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಸೀಸನ್-18ರ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಿಂಹದಂತೆ ಘರ್ಜಿಸಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
ಕಿಂಗ್ ಕೊಹ್ಲಿ ಅರ್ಧಶತಕ ಪೂರೈಸುತ್ತಿದ್ದಂತೆ ಅಭಿಮಾನಿಯೊಬ್ಬರು ಮೈದಾನದ ಸಿಬ್ಬಂದಿಗಳ ಕಣ್ತಪ್ಪಿಸಿ ಮೈದಾನಕ್ಕೆ ಎಂಟ್ರಿ ಕೊಟ್ಟು ನೇರವಾಗಿ ಬಂದು ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದು ಕೊಹ್ಲಿಯನ್ನು ತಬ್ಬಿಕೊಳ್ಳುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದಾನೆ.
ಅಷ್ಟರಲ್ಲಾಗಲೇ ಮೈದಾನದ ಸಿಬ್ಬಂದಿಗಳು ಧಾವಿಸಿ ಬಂದು ಅಭಿಮಾನಿಯನ್ನು ವಶಕ್ಕೆ ಪಡೆದರು. ಈ ವೇಳೆ ಜಾಗೃತೆ, ಆತನನ್ನು ಏನೂ ಮಾಡ್ಬೇಡಿ ಎಂದು ಕೊಹ್ಲಿ ಮನವಿ ಮಾಡುತ್ತಿರುವುದು ಕಂಡುಬಂದಿದೆ. ಇದೀಗ ಕಿಂಗ್ ಕೊಹ್ಲಿ ಅಭಿಮಾನಿಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.